ಡ್ರಿಂಕ್ ಅಂಡ್ ಡ್ರೈವ್ ಪ್ರಕರಣ: ಪೊಲೀಸ್ ಕೆನ್ನೆಗೆ ಬಾರಿಸಿದ ಬಾಲಿವುಡ್ ನಟಿ!

ಡ್ರಿಂಕ್ ಅಂಡ್ ಡ್ರೈವ್ ಪ್ರಕರಣ: ಪೊಲೀಸ್ ಕೆನ್ನೆಗೆ ಬಾರಿಸಿದ ಬಾಲಿವುಡ್ ನಟಿ!

ಮುಂಬೈ, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಕರ್ತವ್ಯನಿರತ ಪೊಲೀಸ್ ಅಧಿಕಾರಿಗೆ ಕೆನ್ನೆಗೆ ಬಾರಿಸಿದ್ದು ಮತ್ತು ಡ್ರಂಕ್ ಆ್ಯಂಡ್ ಡ್ರೈವ್ ಆರೋಪದಡಿಯಲ್ಲಿ ನಟಿ ರೂಹಿ ಸಿಂಗ್ ಸೇರಿದಂತೆ ಐವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ನಟಿ ರೂಹಿ ಸಿಂಗ್ ಗೆಳೆಯರಾದ ರಾಹುಲ್ ಸಿಂಗ್ ಮತ್ತು ಸ್ವಪ್ನಿಲ್ ಸಿಂಗ್ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೂಹಿ ಸಿಂಗ್ ನೋಟಿಸ್ ನೀಡಲಾಗಿದೆ.

ಸೋಮವಾರ ರಾತ್ರಿ ರೂಹಿ ಸಿಂಗ್ ತನ್ನ ನಾಲ್ವರು ಗೆಳೆಯರೊಂದಿಗೆ ಪಬ್ ನಿಂದ ಮನೆಗೆ ಹಿಂದಿರುಗಿತ್ತಿದ್ದರು. ತಡರಾತ್ರಿ ಬಾಂದ್ರಾದಲ್ಲಿರುವ ಮಾಲ್ ಬಳಿ ಕಾರ್ ನಿಲ್ಲಿಸಿದ್ದಾರೆ. ಶೌಚಾಲಯ ಬಳಸಬೇಕೆಂದು ಮಾಲ್ ಒಳಗಡೆ ಹೋಗಲು ಪ್ರಯತ್ನಿಸಿದ್ದಾರೆ. ತಡರಾತ್ರಿಯಾದ ಹಿನ್ನೆಲೆಯಲ್ಲಿ ಮಾಲ್ ಭದ್ರತಾ ಸಿಬ್ಬಂದಿ ನಟಿಗೆ ಪ್ರವೇಶ ನಿರಾಕರಿಸಿದ್ದಾರೆ. ಪ್ರವೇಶ ನಿರಾಕರಿಸಿದ್ದರಿಂದ ನಟಿ ಮತ್ತು ಸಿಬ್ಬಂದಿ ನಡುವೆ ಜಗಳ ನಡೆದಿದೆ. ಜಗಳ ವಿಕೋಪ ತಿರುಗುತ್ತಿದ್ದಂತೆ ಮಾಲ್ ಸಿಬ್ಬಂದಿ ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದ ರೂಹಿ, ರಾಹುಲ್ ಮತ್ತು ಸ್ವಪ್ನಿಲ್ ಕರ್ತವ್ಯನಿರತ ಇಬ್ಬರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಎಲ್ಲ ದೃಶ್ಯಗಳು ಮಾಲ್ ಮುಂಭಾಗದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ರೂಹಿ ಮತ್ತು ಇಬ್ಬರು ಗೆಳೆಯರಿಗೆ ಅಲ್ಲಿಂದ ತೆರಳಲು ಅನುಮತಿ ನೀಡಿ, ರಾಹುಲ್ ಹಾಗೂ ಸ್ವಪ್ನಿಲ್ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರಿಂದ ಅನುಮತಿ ಪಡೆದು ಕಾರಿನಲ್ಲಿ ಹೊರಟ ರೂಹಿ ನಿಲ್ಲಿಸಲಾಗಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಸಂಬಂಧ ಅತಿ ವೇಗ ಮತ್ತು ಡ್ರಂಕ್ ಆ್ಯಂಡ್ ಡ್ರೈವ್ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಮದು ಡಿಸಿಪಿ ಪರಮಜಿತ್ ಸಿಂಗ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos