ಡಾ. ಶಿವರಾಜ್ ವಿ. ಪಾಟೀಲ್ 80ನೇ ಜನ್ಮ ದಿನಾಚರಣೆ

  • In State
  • January 12, 2020
  • 178 Views
ಡಾ. ಶಿವರಾಜ್ ವಿ. ಪಾಟೀಲ್ 80ನೇ ಜನ್ಮ ದಿನಾಚರಣೆ

ಬೆಂಗಳೂರು, ಜ. 12 : ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ್ ವಿ. ಪಾಟೀಲ್ ಅವರು ಭಾನುವಾರ 80ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅವರ ಜನ್ಮ ದಿನಾಚರಣೆ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸುತ್ತೂರು ವೀರಸಿಂಹಾಸನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಸಿರಿಗೆರೆ ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಪಾಟೀಲರ ಬಾಲ್ಯ, ಶಿಕ್ಷಣ: ವಿರೂಪಣ್ಣ ಪಾಟೀಲ ಹಾಗೂ ಮಲ್ಲಮ್ಮ ದಂಪತಿ ಪುತ್ರನಾಗಿ 1940ರ ಜ.12ರಂದು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಮಲಾಡಕಲ್ ಗ್ರಾಮದಲ್ಲಿ ಶಿವರಾಜ್ ಪಾಟೀಲ್ ಜನಿಸಿದರು. ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದ ಅವರು, ರಾಯಚೂರಿನ ಹಮ್ದರ್ದ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಕಲಬುರಗಿಯ ಸರ್ಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ ಬಳಿಕ ಸೇಠ್ ಶಂಕರ್ ಲಾಲ್ ಲಹೋತಿ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಶಿವರಾಜ್ ಪಾಟೀಲರು ಅನ್ನಪೂರ್ಣಮ್ಮ ಅವರನ್ನು ವಿವಾಹವಾಗಿದ್ದು, ಡಾ. ಶರಣ ಎಸ್. ಪಾಟೀಲ್, ಮಾಲತಿ ಬಿ. ಪಟೇಲ್ ಹಾಗೂ ಬಸವಪ್ರಭು ಎಸ್. ಪಾಟೀಲ್ ಇವರ ಮಕ್ಕಳು.
ವೃತ್ತಿ ಜೀವನ
1962ರ ಜು.25ರಿಂದ 1979ರ ಜ.1ರವರೆಗೆ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿ ಕರ್ತವ್ಯ ನಿರ್ವಹಣೆ. (1967ರಿಂದ 1975ರ ವರೆಗೆ ಸೇಠ್ ಶಂಕರ್ ಲಾಲ್ ಲಹೋತಿ ಲಾ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ)
1979ರಿಂದ 1990ರವರೆಗೆ ಕರ್ನಾಟಕ ಹೈಕೋರ್ಟ್ನಲ್ಲಿ ವಕೀಲಿಕೆ.
1990ರ ಮಾ.29ರಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ. 1994ರಲ್ಲಿ ಮದ್ರಾಸ್ ಹೈಕೋರ್ಟ್ಗೆ ವರ್ಗ. 1999ರಲ್ಲಿ ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ.
2000ರ ಮಾ.15ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ, 2005ರ ಜ.11ರಂದು ನಿವೃತ್ತಿ.
2005ರಿಂದ 2007ರವರೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ, ಹಂಗಾಮಿ ಅಧ್ಯಕ್ಷರಾಗಿ ಸೇವೆ.
2010ರ ಡಿ.13ರಿಂದ 2011ರ ಜ.31ರ ವರೆಗೆ 2ಜಿ ಸ್ಪೆಕ್ಟ್ರಮ್ ಏಕಸದಸ್ಯ ಆಯೋಗಕ್ಕೆ ನೇಮಕ.
2010ರ ಡಿ.21ರಿಂದ 2011ರ ಜೂ.30ರ ವರೆಗೆ ಬಾಲ್ಯ ವಿವಾಹ ತಡೆ ಸಮಿತಿ ಅಧ್ಯಕ್ಷರಾಗಿ ಸೇವೆ.
ಪ್ರಮುಖ ತೀರ್ಪಗಳು

ಫ್ರೆಶ್ ನ್ಯೂಸ್

Latest Posts

Featured Videos