ಹೊಸವರ್ಷ: ಗೃಹ ಸಚಿವ ಡಾ.ಪರಮೇಶ್ವರ್ ಸಭೆ!

ಹೊಸವರ್ಷ: ಗೃಹ ಸಚಿವ ಡಾ.ಪರಮೇಶ್ವರ್ ಸಭೆ!

ಬೆಂಗಳೂರು: ಹೊಸ ವರ್ಷ ಎಂದರೆ ಯಾರಿಗೆತ್ತಾನೆ ಇಷ್ಟ ಇರುವುದಿಲ್ಲಾ ಹೇಳಿ. ಹೊಸ ವರ್ಷದಂದು ಹೊರಗಡೆ ಹೋಗಿ ಪಾರ್ಟಿ ಮಾದುವುದು ತುಂಬಾ ಸರ್ವೆ ಸಾಮಾನ್ಯ ಆಗಿರುತ್ತದೆ.  ಹೊಸವರ್ಷಾಚರಣೆ ಸಂಬಂಧ ಗೃಹ ಸಚಿವ ಡಾ.ಪರಮೇಶ್ವರ್ ಅವರು ವಿಧಾನಸೌಧದಲ್ಲಿ ಪೊಲೀಸ್​ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ಹೊಸ ವರ್ಷಾಚರಣೆ ವೇಳೆ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ. ಹಾಗೂ ಕೊರೊನಾ ಹೆಚ್ಚಾಗುತ್ತಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ MG ರೋಡ್, ಕಮರ್ಷಿಯಲ್ ಸ್ಟೀಟ್​ನಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಜನ ಸೇರಿ ಹೊಸ ವರ್ಷವನ್ನು ಆಚರಣೆ ಮಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಕೆಲವು ಅಹಿತಕರ ಘಟನೆಗಳು ಸಹ ನಡೆದಿದೆ. ಪೊಲೀಸ್ ಇಲಾಖೆ, ಮತ್ತು ಅಬಕಾರಿ ಇಲಾಖೆ, ಮೆಟ್ರೋ, ಕೆಎಸ್​ಆರ್​ಟಿಸಿ ಎಲ್ಲರನ್ನೂ ಕರೆದು ಸಭೆ ಮಾಡಿದ್ದೇನೆ. ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯಬಾರದು.

ಬೇರೆ ಬೇರೆ ದೃಷ್ಟಿ ಇಟ್ಟುಕೊಂಡು ಹೊರಗಿನ ಜನ‌ ತೊಂದರೆ ಮಾಡಬಹುದು, ಅದನ್ನ ಸಹ ನಾವು ಗಮನಿಸುತ್ತೇವೆ. ಇಂಟಲಿಜೆನ್ಸ್ ವಿಂಗ್ ಅದನ್ನ ವಾಚ್ ಮಾಡಲಿದೆ ಎಂದರು. ಇನ್ನು ಇದೇ ವೇಳೆ ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ನಿರ್ಬಂಧ ವಿಚಾರವಾಗಿ ಮಾತನಾಡಿದ ಸಚಿವ ಪರಮೇಶ್ವರ್, ಸಧ್ಯಕ್ಕೆ ಯಾವುದೇ ಬದಲಾವಣೆ ಮಾಡಲು ಹೋಗೋದಿಲ್ಲ. ಹೆಚ್ಚು ಜನ ಇದ್ದಾಗ ಮಾಸ್ಕ್ ಹಾಕಬೇಕು ಎಂದು ಆರೋಗ್ಯ ಇಲಾಖೆಯಿಂದ ಸೂಚನೆ ಬಂದಿದೆ. ಅದನ್ನ ಬಿಟ್ಟರೆ ಬೇರೆ ಯಾವುದೇ ನಿರ್ಬಂಧ ಇಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos