ಡಾ.ಅಂಬೇಡ್ಕರ್ ಅವರ 63 ನೇ  ಪರಿನಿರ್ವಹಣ ಮುಂಬೈ ಯಾತ್ರೆ

ಡಾ.ಅಂಬೇಡ್ಕರ್ ಅವರ 63 ನೇ  ಪರಿನಿರ್ವಹಣ ಮುಂಬೈ ಯಾತ್ರೆ

ಕೆ.ಆರ್.ಪುರ, ನ. 22: ಕೆ.ಆರ್.ಎಸ್ ರಾಜ್ಯಾದ್ಯಕ್ಷ ಜಿಗಣಿ ಶಂಕರ್ ನೇತೃತ್ವದಲ್ಲಿ  ಚೈತ್ಯ ಭೂಮಿ ಚಲೋ ಕಾರ್ಯಕ್ರಮ ದಡಿ 7ನೇಯ ವರ್ಷ ಮುಂಬೈ ಮಹಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಭೂ ನ್ಯಾಯ ಮಂಡಳಿ ಸದಸ್ಯ ಬಿ.ಕೃಷ್ಣಪ್ಪ ತಿಳಿಸಿದರು.

ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ 63 ನೇಯ ಮಹ ಪರಿನಿರ್ವಹಣಾ ಅಂಗವಾಗಿ ಪ್ರಥಮವಾಗಿ ಹೊಸಕೋಟೆಯ ಡಾ.ಅಂಬೇಡ್ಕರ್ ಕಾಲೋನಿಯಲ್ಲಿರುವ ಬಾಬಾ ಸಾಹೇಬರ ಪುತ್ತಳಿ ಸ್ವಚ್ಛ ಗೊಳಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

7ನೇಯ ಮುಂಬೈ ಮಹಾ ಯಾತ್ರೆಯ ಅಂಗವಾಗಿ ಬೆಂಗಳೂರು ನಗರ‌ ಹಾಗೂ ಗ್ರಾಮಾಂತರ ಬಾಗದಲ್ಲಿ  ಬರುವ ಡಾ.ಅಂಬೇಡ್ಕರ್ ಪುತ್ತಳಿಗನ್ನು ಸ್ವಚ್ಛಗೊಳಿಸಿ ಪುಷ್ಪಹಾರ ಹಾಕಿ ಕ್ಯಾಂಡಲ್ ಹಚ್ಚಲಾಗುವುದೆಂದರು.

ದಿನ ಒಂದರಂತೆ ಎಲ್ಲಾ ಪುತ್ತಳಿಗಳನ್ನು  ಸ್ವಚ್ಛಗೊಳಿಸಿ ಅಂತಿಮವಾಗಿ ಡಿಸೆಂಬರ್ 4 ರಂದು ವಿಧಾನ ಸೌಧ ಬಳಿಯಿರುವ ಡಾ.ಅಂಬೇಡ್ಕರ್ ಪುತ್ತಳಿಯನ್ನು ಸ್ವಚ್ಚಗೊಳಿಸಿ ಪುಷ್ಪ ಹಾರ ಹಾಕಿ ನಂತರ ಮುಂಬೈಗೆ ಮಹಾ ಯಾತ್ರೆ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

 ಇದೇ ಸಮಯದಲ್ಲಿ ಬೆಳತೂರು ವೆಂಕಟೇಶ್ ಮಾತನಾಡಿ  ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಮೊಮ್ಮಗ ಆನಂದ್ ರಾಜ್ ಅಂಬೇಡ್ಕರ್ ರವರ ಆದೇಶ ದಂತೆ ಪ್ರತಿ ವರ್ಷ ಜಿಗಣಿ ಶಂಕರ್ ಅವರ ನೇತೃತ್ವದಲ್ಲಿ ಮುಂಬೈಗೆ ತೆರಳಲಾಗುತ್ತದೆ ಎಂದರು.

ಜೈತ್ಯ ಭೂಮಿಯಲ್ಲಿ ಬಾಬಾ ಸಾಹೇಬರ ಸಮಾಧಿ ದರ್ಶನ ಹಾಗೂ ಪುಷ್ಪ ಅರ್ಪಿಸುವ ‌ಮೂಲಕ ತಮ್ಮ ಋಣ ತೀರಿಸಲು ಸಾವಿರಾರು ಕರ್ನಾಟಕ ರಿಪಬ್ಲಿಕ್‌ ಸೇನಾ ಕಾರ್ಯಕರ್ತರು ಮುಂಬೈ ಮಹಾ ಯಾತ್ರೆ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕೆ.ಆರ್.ಎಸ್. ಕಾರ್ಮಿಕ ಘಟಕದ ರಾಜ್ಯಾದ್ಯಕ್ಷ ಕನ್ನಲಿ ಕೃಷ್ಣಪ್ಪ, ಮಾಜಿ ನಗರ ಸಭಾ ಸದಸ್ಯ ಶಂಭಪ್ಪ, ಬೆಂಗಳೂರು ಪೂರ್ವ ತಾಲ್ಲೂಕು ಅದ್ಯಕ್ಷ ಕಾವೇರಪ್ಪ, ಹೊಸಕೋಟೆ ತಾಲ್ಲೂಕು ಅಧ್ಯಕ್ಷೆ ಶಿರಿಷಾ, ಹೆಬ್ಬಾಳ ಅದ್ಯಕ್ಷ  ಕುಮರೇಶ್, ನಾರಾಯಣಸ್ವಾಮಿ, ಎಂ.ರಾಜು, ನಾಗರಾಜ್ ಮುಂತಾದವರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos