ದೋಸ್ತಿ ಭವಿಷ್ಯ

ದೋಸ್ತಿ ಭವಿಷ್ಯ

ಬೆಂಗಳೂರು, ಜು. 18 : ದೋಸ್ತಿ ಸರ್ಕಾರದ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸರ್ಕಾರ ಉರುಳಿದರೆ ಏನಾಗುತ್ತೋ? ಉಳಿಯದಿದ್ದರೆ ಇನ್ನೇನೂ ಆಗುತ್ತೋ ಎನ್ನುವ ಆತಂಕ ಶುರು. ಶುಕ್ರವಾರದಂದು ಇಡೀ ಬೆಂಗಳೂರಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದ್ದು, ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಪೊಲೀಸ್ ರನ್ನು ನಿಯೋಜನೆ ಮಾಡಲಾಗಿದೆ. ನಗರದ ಎಲ್ಲಾ ಪೊಲೀಸರು, ಬೆಂಗಳೂರು ಹೊರವಲಯದ ಪೊಲೀಸರು, 15 ಪೆಟ್ಲೋನ್ ಕೆಎಸ್ಆರ್ಪಿ ಪೊಲೀಸ್ ರನ್ನು ನಿಯೋಜನೆ ಮಾಡಲಾಗಿದೆ. ಎಲ್ಲಾ ಪ್ರಮುಖ ರಾಜಕಾರಣಿಗಳ ಮನೆಗೆ ಬಂದೋಬಸ್ತ್ ಮಾಡಲಾಗಿದೆ. ಅದರಲ್ಲೂ ಅತೃಪ್ತ ಶಾಸಕರ ಮನೆಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸೌದದ ಸುತ್ತ ನಿಷೇಧಾಜ್ಞೆ ಹೇರುವ ಸಾಧ್ಯತೆಯಿದೆ.

ಫ್ರೆಶ್ ನ್ಯೂಸ್

Latest Posts

Featured Videos