ದೋಸ್ತಿ ಕಾಲಹರಣ ಮಾಡುತ್ತಿದೆ: ಬಿಜೆಪಿ ಆಕ್ರೋಶ

ದೋಸ್ತಿ ಕಾಲಹರಣ ಮಾಡುತ್ತಿದೆ: ಬಿಜೆಪಿ ಆಕ್ರೋಶ

ಬೆಂಗಳೂರು, ಜು. 18: ವಿಶ್ವಾಸಮತ ಯಾಚನೆ ಮಾಡುವುದಾಗಿ ಸಿಎಂ ಹೇಳಿದ್ದರಿಂದಲೇ ನಾವು ಸದನಕ್ಕೆ ಬಂದಿದ್ದೇವೆ. ಆದರೆ ವಿಶ್ವಾಸಮತ ಮೇಲೆ ಅನಗತ್ಯ ಚರ್ಚೆ ನಡೆಸುವ ಮೂಲಕ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಕಾಲಹರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆ ಮಾಡುವುದಾಗಿ ಸದನಕ್ಕೆ ಹೇಳಿದ್ದಾರೆ. ಈ ಮೊದಲು ಸೋಮವಾರ ವಿಶ್ವಾಸ ಮತ ಯಾಚಿಸುವುದಾಗಿ ಹೇಳಿ ಗುರುವಾರಕ್ಕೆ ಮುಂದೂಡಲಾಗಿತ್ತು. ಅವರು ಹೇಳಿದ್ದರಿಂದ ಬಂದಿದ್ದೇವೆ. ಕಲಾಪ ಸಮಿತಿ ಸಭೆಯಲ್ಲಿ ಹೇಳಿದಂತೆ ಕುಮಾರಸ್ವಾಮಿ ವಿಶ್ವಾಸಮತ ನಿರ್ಣಯ ಮಂಡಿಸಿದ್ದು, ನಿರ್ಣಯವನ್ನು ಮತಕ್ಕೆ ಹಾಕಲಿ ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದ್ದಾರೆ.

ಇನ್ನು ರಾಜ್ಯಪಾಲರ ಪ್ರತಿನಿಧಿ ಸದನದಲ್ಲಿ ಆಸೀನರಾಗಿದ್ದಾರೆ. ಅವರು ಇಲ್ಲಿನ ಮಾಹಿತಿಗಳನ್ನು ರಾಜ್ಯಪಾಲರಿಗೆ ನೀಡುತ್ತಿದ್ದು, ರಾಜ್ಯಪಾಲರು ವಿಶ್ವಾಸಮತದ ಬಗ್ಗೆ ನಿರ್ದೇಶನ ನೀಡಿದ್ದಾರೆ. ಸದನದ ನಡಾವಳಿಯಲ್ಲಿ ಅವರು ಮಧ್ಯ ಪ್ರವೇಶಿಸುವಂತಿಲ್ಲ ಎಂದು ಕಾಂಗ್ರೆಸ್ ಸದಸ್ಯ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.

ದಿನೇಶ್ ಗುಂಡೂರಾವ್ ಕೂಡ ಇದೇ ಮಾತುಗಳನ್ನಾಡಿದ್ದು, ಚರ್ಚೆಯ ಬಳಿಕ ಮತಕ್ಕೆ ಹಾಕಬೇಕು. ಮೊದಲು ಚರ್ಚೆ ನಡೆಯಲಿ ಎಂದಿದ್ದಾರೆ. ಇದು ಬಿಜೆಪಿ ಸದಸ್ಯರನ್ನು ಕೆರಳಿಸಿದ್ದು, ನಮಗೆ ಅನಗತ್ಯ ಚರ್ಚೆ ಬೇಕಿಲ್ಲ. ಮತಕ್ಕೆ ಹಾಕಿ ಎಂದು ಒತ್ತಾಯಿಸಿದ್ದಾರೆ. ರಾಜ್ಯಪಾಲರು ಇಂದೇ ವಿಶ್ವಾಸಮತ ನಿಗದಿಗೆ ನಿರ್ದೇಶನ ನೀಡಿದ್ದು, ಈ ಬಗ್ಗೆ ನಿಲುವು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos