ಆತಂಕ ಬೇಡ: ಮುನ್ನೆಚ್ಚರಿಕೆ ಇರಲಿ

ಆತಂಕ ಬೇಡ: ಮುನ್ನೆಚ್ಚರಿಕೆ ಇರಲಿ

ದೇವನಹಳ್ಳಿ: ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಕಾಲೇಜಿಗೆ ಬನ್ನಿ. ಸುರಕ್ಷತೆ, ಮುಂಜಾಗ್ರತೆ ಇವೆರಡು ನಮ್ಮನ್ನು ಕಾಯುವ ಅಸ್ತ್ರಗಳು ಎಂದು ವಿಜಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಶಶಿಕುಮಾರ್ ತಿಳಿಸಿದರು.
ಕಾಲೇಜು ಆರಂಭವಾದ ಮೊದಲ ದಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರನ್ನು ಉದ್ದೇಶಿಸಿ ಮಾತನಾಡಿ, ಆನ್ ಲೈನ್ ತರಗತಿ ನೀಡಿದ್ದರೂ ಕಾಲೇಜು ಆರಂಭವಾದ ಮೇಲೆ ಮೊದಲ ಪಾಠದಿಂದಲೇ ಬೋಧನೆ ಆರಂಭಿಸುತ್ತೇವೆ. ಎಲ್ಲರೂ ಕಾಲೇಜಿಗೆ ಬರುವುದು ಕಡ್ಡಾಯ ಅಲ್ಲದಿದ್ದರೂ, ಕಾಲೇಜಿಗೆ ಬಂದರೂ ಸುರಕ್ಷಿತವಾಗಿ ಇರುವಂತೆ ಸೂಕ್ತಕ್ರಮ ಕೈಗೊಳ್ಳುಲಾಗಿದೆ. ಊಟ ಮತ್ತು ಕುಡಿಯುವ
ನೀರಿನ ಬಾಟಲಿಯನ್ನು ವಿದ್ಯಾರ್ಥಿಗಳೆ ತರಬೇಕು. ಹಾಗೂ ಊಟ ತಿಂಡಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದು ಬೇಡ ಎಂದು ತಿಳಿಸಿದರು.
ದ್ವಿತೀಯ ಪಿಯು ಕಲಾ ವಿಭಾಗದ ವಿದ್ಯಾರ್ಥಿ ಮಹಮದ್ ಸುಹೇಲ್ ಮಾತನಾಡಿ, ಬಹಳ ದಿನ ಯೂಟ್ಯೂಬ್ ನಲ್ಲಿ ಪಾಠ ಕೇಳುವುದು ಕಿರಿಕಿರಿ ಎನಿಸಿತ್ತು. ಕಾಲೇಜು ವಾತಾವರಣದಲ್ಲಿ ಪಾಠ ಕೇಳುವುದೇ ಇಷ್ಟ. ಮಾಸ್ಕ್ ಧಾರಣೆ ಮತ್ತು ಅಂತರ ಕಾಯ್ದುಕೊಂಡು ಕಾಲೇಜಿಗೆ ಸುರಕ್ಷಿತವಾಗಿ ಬಂದು ಹೋಗುತ್ತೇವೆ. ಮೊದಲ ದಿನದ ಕಾಲೇಜಿಗೆ ಬಂದಿದ್ದು ಖುಷಿಯಾಗಿದೆ ಎಂದು ತಿಳಿಸಿದರು.
ಕಾಲೇಜಿನಲ್ಲಿ ೧೪೩ ವಿದ್ಯಾರ್ಥಿಗಳು ದಾಖಲಾತಿ ಇದ್ದು ಕಾಲೇಜು ಆರಂಭವಾದ ಮೊದಲ ದಿನ ೨೫ ವಿದ್ಯಾರ್ಥಿಗಳು ಹಾಜರಿದ್ದರು. ಉಪನ್ಯಾಸಕರು ಮತ್ತು ಬೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos