ಶ್ವಾನ ಸಮಾಧಿಗೆ ನಮನ

ಶ್ವಾನ ಸಮಾಧಿಗೆ ನಮನ

ವಡೋದರಾ: ‘’ನಾನು ಹೊರಗೆ ಹೋಗುವಾಗ ನನ್ನ ಬೈಕ್‌ ಮೇಲೆ ಹತ್ತಿ ಹಿಂದೆ ಕುಳಿತುಕೊಳ್ಳುತ್ತಿತ್ತು, ನಡೆದು ಹೋಗುವಾಗ ಹಿಂಬಾಲಿಸುತ್ತಿತ್ತು ಎಂದು 12 ವರ್ಷಗಳ ಹಿಂದೆ ಅಗಲಿದ ನಾಯಿ ಸಮಾಧಿಗೆ  ಗೌರನಮನ ಸಲ್ಲಿಸಿ ಪ್ರಶಾಂತ್‌ ನೆನಪು ಮಾಡಿಕೊಂಡಿದ್ದಾರೆ.  ಎಲ್ಲರು ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವಸ್ಥಾನಕ್ಕೆ ತೆರಳಿದರೆ ಗುಜರಾತ್‌ನ ಬಿಲ್ಡರ್‌ ಪ್ರತಿದಿನ  ನಾಯಿಯ ಸಮಾಧಿಗೆ ಹೋಗಿ ಗೌರವ ನಮನ ಸಲ್ಲಿಸುತ್ತಿದ್ದಾರೆ.

2007ರಲ್ಲಿ ಟೋನಿ ವಯೋಸಹಜವಾಗಿ ನಮ್ಮನ್ನು ಅಗಲಿದಾಗ ಖಾಸ್ವಾಡಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಿ ಸಮಾಧಿ ನಿರ್ಮಿಸಿದ್ದೇವೆ. ದಿನದ ಆರಂಭ ಎಂಬಂತೆ ಮೊದಲು ಸಮಾಧಿಗೆ ಹೋಗಿ ಹೂಗಳನ್ನು ಅರ್ಪಿಸಿ ಇತರ ಬೀದಿ ನಾಯಿಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಆಹಾರ ಅರ್ಪಿಸಿ ಬರುತ್ತೇನೆ. ನಂತರ ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಪ್ರಶಾಂತ್‌ ತಮ್ಮ ದೈನಂದಿನ ಆಚರಣೆ ಬಗ್ಗೆ ವಿವರಿಸಿದ್ದಾರೆ.  ನಾನು ಯಾವತ್ತು ಟೋನಿಗೆ ನೋವು ಮಾಡಿಲ್ಲ. ಅದು ನಮ್ಮ ಸ್ವಂತ ಮಗನಂತೆ ಇತ್ತು. ನಾವೇನು ಅದಕ್ಕೆ ತರಬೇತಿ ನೀಡಿಲ್ಲ. ಮನೆಯನ್ನು ಗಲೀಜು ಮಾಡುತ್ತಿರಲಿಲ್ಲ. ನನ್ನನ್ನು ಬಿಟ್ಟಿರುತ್ತಿರಲಿಲ್ಲ. ನಾನು ಹೊರಗೆ ಹೋಗುವಾಗ ನನ್ನ ಬೈಕ್‌ ಮೇಲೆ ಹತ್ತಿ ಹಿಂದೆ ಕುಳಿತುಕೊಳ್ಳುತ್ತಿತ್ತು, ನಡೆದು ಹೋಗುವಾಗ ಹಿಂಬಾಲಿಸುತ್ತಿತ್ತು ಎಂದು ಪ್ರಶಾಂತ್‌ ನೆನಪು ಮಾಡಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos