ನಾಯಿ ಜೊತೆ ವಧು ಸಖತ್ ಸ್ಟೆಪ್..!

ನಾಯಿ ಜೊತೆ ವಧು  ಸಖತ್ ಸ್ಟೆಪ್..!

ಜೂ. 27: ಸೆಲೆಬ್ರಿಟಿ ನಾಯಿ ತರಬೇತುದಾರರಾದ ಸಾರಾ ಕಾರ್ಸನ್ ಅವರು ತಮ್ಮ ಪ್ರೀತಿಪಾತ್ರ ನಾಯಿಯೊಂದಿಗೆ ಹೆಜ್ಜೆ ಹಾಕಿರುವ ವಿಡಿಯೊ ಈಗ ವೈರಲ್ ಆಗಿದೆ.

ವಿವಾಹ ಸಂಭ್ರಮದಲ್ಲಿರುವ ಸಾರಾ ಅವರು ತಮ್ಮ ಏಳು ವರ್ಷದ ನಾಯಿಯೊಂದಿಗೆ ಡಾನ್ಸ್ ಫ್ಲೋರ್ನಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ ಜೊತೆಗೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾರಾಗೆ ಸರಿಸಮಾನವಾಗಿ ಎರಡು ಕಾಲುಗಳಲ್ಲಿ ನಾಯಿಯೂ ಸ್ಟೆಪ್ ಹಾಕಿದ್ದು ಗಮನ ಸೆಳೆದಿದೆ. ಈ ವಿಡಿಯೋಗೆ ಸಾಕಷ್ಟು ಲೈಕ್, ಕಾಮೆಂಟುಗಳು ಬಂದಿವೆ. ಒಂಬತ್ತು ಲಕ್ಷ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos