ದೊಡ್ಡಬಳ್ಳಾಪುರದಲ್ಲಿ ಮಾರ್ಚ್ 23, 24ರಂದು ರೇಷ್ಮೆ ಸೀರೆ ಉತ್ಸವ

ದೊಡ್ಡಬಳ್ಳಾಪುರದಲ್ಲಿ ಮಾರ್ಚ್ 23, 24ರಂದು ರೇಷ್ಮೆ ಸೀರೆ ಉತ್ಸವ

ದೊಡ್ಡಬಳ್ಳಾಪುರ, ಮಾ.16, ನ್ಯೂಸ್ ಎಕ್ಸ್ ಪ್ರೆಸ್: ಸೀರೆಯುಡುವ ನಾರಿಯರಿಗೆ ಆಯ್ಕೆ ಹಲವು. ಕಂಚಿ, ಕಾಂಚಿಪುರ, ಮೈಸೂರು, ಸೂರತ್, ಬನಾರಸ್, ಇಳಕಲ್ ಸೀರೆ, ಮೊಳಕಾಲ್ಮೂರು ಸೀರೆ ಹೀಗೆ ಹಲವು ಬ್ರ್ಯಾಂಡ್ ಸೀರೆಗಳಿವೆ. ಇದರ ಸಾಲಿಗೆ ಈಗ ಮತ್ತೊಂದು ಸೀರೆ ಮಾರುಕಟ್ಟೆಗೆ ಬರುತ್ತಿದೆ. ಅದುವೇ ದೊಡ್ಡಬಳ್ಳಾಪುರ ಸಿಲ್ಕ್..

ಹೌದು, ನೇಕಾರಿಕೆಯ ಪ್ರಮುಖ ಉದ್ಯಮವಾಗಿರುವ ಈ ಊರನ್ನು ಮಗ್ಗದೂರು ಅಂತಾನೇ ಕರೆಯಬಹುದು. ಇದು ದೊಡ್ಡಬಳ್ಳಾಪುರ ನಗರದ ನೇಕಾರಿಕೆಯ ಸಣ್ಣ ಪರಿಚಯವಷ್ಟೇ.  ನಗರದಲ್ಲಿ  25 ಸಾವಿರಕ್ಕೂ ಹೆಚ್ಚು ಮಗ್ಗಗಳಿಂದ ರೇಷ್ಮೆ ಸೀರೆ ಹೊರ ಬರುತ್ತಿವೆ.ಇಲ್ಲಿ ತಯಾರಾಗುವ ಸೀರೆಗಳು ದೇಶದ ವಿವಿಧ ನಗರಗಳಿಗೆ ಹೋಗಿ ವಿವಿಧ ಬಣ್ಣ ಮತ್ತು ಡಿಸೈನ್ ಪಡೆದು ಬೇರೆಯದ್ದೇ ಬ್ರ್ಯಾಂಡ್ ಹೆಸರಿನೊಂದಗೆ ಮತ್ತೇ ದೊಡ್ಡಬಳ್ಳಾಪುರ ನಗರಕ್ಕೆ ಬರುತ್ತಿವೆ. ಇದು ದೊಡ್ಡಬಳ್ಳಾಪುರ ನೇಕಾರಿಕೆಯ ದು:ಸ್ಥಿತಿ ಎಂದರೆ ತಪ್ಪಾಗಲಾರದು. ನಮ್ಮೂರಿನ ಸೀರೆಗಳಿಗೂ ಒಂದು ಬ್ರ್ಯಾಂಡ್ ಬೇಕು, ಮಾರುಕಟ್ಟೆಯಲ್ಲಿ ದೊಡ್ಡಬಳ್ಳಾಪುರ ಸಿಲ್ಕ್ ಅಂತಾನೇ ಪ್ರಸಿದ್ಧಿಯನ್ನ ಪಡೆಯಬೇಕೆನ್ನುವ ಸಣ್ಣದೊಂದು ಕನಸು ಇಲ್ಲಿನ ನೇಕಾರರಲ್ಲಿಇದೆ.
ನವಿರಾದ ಬಟ್ಟೆ ನೇಯುವಲ್ಲಿ ನಿಪುಣರು
ದೊಡ್ಡಬಳ್ಳಾಪುರದಲ್ಲಿ ನೇಯುವ ಬಟ್ಟೆ ಇಡೀ ದೇಶಕ್ಕೆ ಮಾದರಿಯಾಗಿದೆ. ಒಂದು ಮೀಟರ್ ಬಟ್ಟೆಯನ್ನು ಕೇವಲ 18 ಗ್ರಾಂನಲ್ಲಿ ಮಾತ್ರ ನೇಯುತ್ತಾರೆ. ಇದು ದೊಡ್ಡಬಳ್ಳಾಪುರ ನೇಕಾರರಿಂದ ಮಾತ್ರ ಸಾಧ್ಯ. ಇದೇ ಒಂದು ಮೀಟರ್ ಬಟ್ಟೆಯನ್ನು ಹ್ಯಾಡ್ ಲೂಮ್ಸ್​​​ನಲ್ಲಿ ನೇಯ್ದರೆ 60 ಗ್ರಾಂಕ್ಕಿಂತಲೂ ಹೆಚ್ಚಿರುತ್ತದೆ. ಇಡೀ ಸೀರೆಯನ್ನ ಮಡಿಚಿ ಬೆಂಕಿ ಪೊಟ್ಟಣದಲ್ಲಿ ಇಡುವಷ್ಟು ನವಿರಾದ ಬಟ್ಟೆಯನ್ನು ನೇಯುವಲ್ಲಿ ಸ್ಥಳೀಯ ನೇಕಾರರು ನೈಪುಣ್ಯತೆ ಹೊಂದಿದ್ದಾರೆ.
ಸೀರೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ದೊಡ್ಡಬಳ್ಳಾಪುರ ಸಿಲ್ಕ್ ..!
ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿ ನೇಕಾರಿಕೆ ಇದೆ. ಕೈ ಮಗ್ಗದಿಂದ ಹಿಡಿದು ಪವರ್ ಲೂಮ್ಸ್​​​ವರೆಗೂ ನೇಕಾರಿಕೆ ದೊಡ್ಡಬಳ್ಳಾಪುರದ ಪ್ರಮುಖ ಉದ್ಯಮ. ನಗರದಲ್ಲಿ 25 ಸಾವಿರಕ್ಕೂ ಹೆಚ್ಚು ಮಗ್ಗಗಳಿವೆ. ಪ್ರತಿನಿತ್ಯ ಲಕ್ಷಾಂತರ ಸೀರೆಗಳು ಉತ್ಪಾದನೆಯಾಗುತ್ತವೆ. ಕೋಟಿಗಟ್ಟಲೆ ವಹಿವಾಟು ನಡೆಯುತ್ತದೆ. ಅದರೆ ಇಲ್ಲಿನ ನೇಕಾರರು ಯಾವತ್ತೂ ಮಾರುಕಟ್ಟೆಯ ಬಗ್ಗೆ ಚಿಂತನೆ ನಡೆಸಿದವರಲ್ಲ. ಇಲ್ಲಿ ತಯಾರಾಗುವ ಸೀರೆಗಳು ಸೂರತ್, ಚೆನ್ನೈ, ಹೈದರಾಬಾದ್ ಮತ್ತು ಧರ್ಮಾವರಂಗೆ ಹೋಗುತ್ತವೆ. ಅದೇ ಸೀರೆಗಳು ಸೂರತ್​​, ಧರ್ಮಾವರಂ ಬ್ರ್ಟಾಂಡ್ ಪಡೆದು ಮತ್ತೆ ದೊಡ್ಡಬಳ್ಳಾಪುರ ಮಾರುಕಟ್ಟೆಗೆ ಬಂದು ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ ಎನ್ನಲಾಗುತ್ತಿದೆ.
ಮಾರ್ಚ್ 23, 24 ರಂದು ಸೀರೆ ಉತ್ಸವ..! 
ದೊಡ್ಡಬಳ್ಳಾಪುರ ಸಿಲ್ಕ್ ಸೀರೆಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಕಾರಣಕ್ಕೆ ನಗರದಲ್ಲಿ ಮತ್ತು ಬೆಂಗಳೂರಿನಲ್ಲಿ ಸೀರೆ ಉತ್ಸವ ಆಯೋಜಿಸುವ ಪ್ಲಾನ್​ ಮಾಡಲಾಗಿದೆ. ಶಾಶ್ವತವಾಗಿ ಮಾರುಕಟ್ಟೆ ಮಳಿಗೆಯನ್ನು ತೆರೆಯುವ ಮೂಲಕ ದೊಡ್ಡಬಳ್ಳಾಪುರ ಸಿಲ್ಕ್​​ಗೆ ಮಾರುಕಟ್ಟೆ ಬ್ರ್ಯಾಂಡ್ ಕೊಡಲಾಗುವುದು. ನಗರ ಹೊರವಲಯದ ಹಿಂದೂಪುರ ರಸ್ತೆಯ ಬದಿ 1.20 ಎಕರೆ ಜಾಗವನ್ನು ಮಾರಾಟ ಮಳಿಗಾಗಿ ಗುರುತಿಸಲಾಗಿದೆ. ಈ ಮಳಿಗೆಗಳಲ್ಲಿ  ಸ್ಥಳೀಯ ನೇಕಾರರು ನೇಯುವ ಸೀರೆಗಳಿಗೆ ಮಾತ್ರ ಮಾರಾಟ ವ್ಯವಸ್ಥೆ ಒದಗಿಸಲಾಗುತ್ತದೆ.
ಇಲ್ಲಿನ ಸೀರೆಗಳಿಗೆ ಬ್ರ್ಯಾಂಡ್ ಕಲ್ಪಿಸುವ ಕಾರಣಕ್ಕೆ ಮಾರ್ಚ್ 23, 24 ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸೀರೆ ಉತ್ಸವ ಮಾಡಲಾಗುವುದು. ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಸಭೆಗಳನ್ನು ನಡೆಸಿ ಪ್ರಚಾರ ನೀಡಲಾಗುವುದು. ಇದರಿಂದ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆ ಇದೆ. ಹಾಗೆಯೇ  ಸೀರೆ ಉತ್ಸವವನ್ನು ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ಅವರಿಂದ ಉದ್ಘಾಟಿಸುವ  ಪ್ರಯತ್ನವನ್ನು ನೇಕಾರರ ಸಂಘ ಮಾಡಲಿದೆ.

ಫ್ರೆಶ್ ನ್ಯೂಸ್

Latest Posts

Featured Videos