ಡಾಕ್ಟರ್ ಪಾತ್ರದಲ್ಲಿ ಅನು ಪ್ರಭಾಕರ್

ಡಾಕ್ಟರ್ ಪಾತ್ರದಲ್ಲಿ ಅನು ಪ್ರಭಾಕರ್

ಬೆಂಗಳೂರು, ಜೂ. 26: ಕನ್ನಡ ಚಿತ್ರರಂಗದಲ್ಲಿ ‘ನೆನಪಿರಲಿ’ ಚಿತ್ರದಿಂದ ಅಭಿಮಾನಿಗಳ ಮನಗೆದ್ದಿರುವ ನಟ ಪ್ರೇಮ್,  ಹೌದು, ನೆನಪಿರಲಿ ಸಿನಿಮಾದಿಂದ ಅಭಿಮಾನಿಗಳ ಮನ ಗೆದ್ದಿರುವ ಪ್ರೇಮ್ ಈಗ ತಮ್ಮ ನಟನೆಯ ಬಹುನಿರೀಕ್ಷಿತ 25 ನೇ ಸಿನಿಮಾ ‘ಪ್ರೇಮಂ ಪೂಜ್ಯಂ’. ಈಗಾಗಲೇ ಈ ಚಿತ್ರವು ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದು, ಪ್ರೇಮ್ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಈ ಚಿತ್ರಕ್ಕೀಗ ಅನು ಪ್ರಭಾಕರ್ ರವರ ಎಂಟ್ರಿಯಾಗಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಅವರು ವೈದ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ವೇಳೆ ಅವರ ಪಾತ್ರದ ಆಗಮನವಾಗಲಿದ್ದು, ಕೆಲವೇ ನಿಮಿಷ ಕಂಡರೂ ಚಿತ್ರಕ್ಕೆ ಮಹತ್ವದ ತಿರುವು ನೀಡಲಿದೆಯಂತೆ.

ಈಗಾಗಲೇ ಅನು ಪ್ರಭಾಕರ್ ಅವರ ಪಾಲಿನ ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿಕೊಂಡಿದ್ದು, ಈ ಪಾತ್ರದ ಕುರಿತಂತೆ ಖುಷಿ ವ್ಯಕ್ತಿಪಡಿಸಿ, ತಮ್ಮ ಟ್ವಿಟರ್ ಖಾಯೆಯಲ್ಲಿ ಹಂಚಿಕೊಂಡಿದ್ದಾರೆ. ‘ಪಾತ್ರ ಸಣ್ಣದಾದರೂ ಒಳ್ಳೆಯ ಪಾತ್ರದಲ್ಲಿ ನಟಿಸಿದ ಖುಷಿ ನನಗಿದೆ’ ಎಂದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos