ಬ್ರೇಕಪ್ ಆಗಲು ಕಾರಣವಾದ ಡಿ.ಎನ್.ಎ. ಟೆಸ್ಟ್?

ಬ್ರೇಕಪ್ ಆಗಲು ಕಾರಣವಾದ ಡಿ.ಎನ್.ಎ. ಟೆಸ್ಟ್?

ಏ. 20, ನ್ಯೂಸ್ ಎಕ್ಸ್ ಪ್ರೆಸ್: ಹೊಸ ಜೋಡಿಗಳು ಖುಷಿಗೆ ರೆಸ್ಟೋರೆಂಟ್, ಸಿನಿಮಾ, ಹನಿಮೂನ್ ಗೆ ಅಂತ ಹೋಗೋದು ನೋಡಿದ್ದೇವೆ, ಕೇಳಿದ್ದೇವೆ…..ಖುಷಿಗೆ ಡಿಎನ್ಎ ಟೆಸ್ಟ್ ಮಾಡಿಸಿಕೊಳ್ಳೋದು ಕೇಳಿದ್ದೀರಾ? ವಿಚಿತ್ರ ಅಂದ್ರೆ ಡಿಎನ್ಎ ರಿಸಲ್ಟ್ ಇಬ್ಬರ ಸಂಬಂಧವನ್ನು ಹಾಳು ಮಾಡಿದೆ. ಡಿಎನ್ಎ ಟೆಸ್ಟ್ ನಿಂದ ನಮ್ಮ ಪೂರ್ವಜರ ಹಾಗು ವಂಶವೃಕ್ಷದ ಬಗ್ಗೆ ತಿಳಿಯಬಹುದು.‌ಈ ಬಗ್ಗೆ ಸಂಶೋಧನೆ ಮಾಡಬಹುದು ಅಂಥ ಆ ಜೋಡಿ ತೀರ್ಮಾನಿಸಿತ್ತು. ಇದೇ ಖುಷಿಗಾಗಿ ತಮ್ಮನ್ನು ಡಿಎನ್ಎ ಟೆಸ್ಟ್ ಗೆ ಒಡ್ಡಿಕೊಂಡಿತು. ಆದ್ರೆ ಡಿಎನ್ಎ ಟೆಸ್ಟ್ ರಿಸಲ್ಟ್ ಬಂದಿದ್ದೆ ಅವರ ಬ್ರೇಕಪ್ ಗೆ ಕಾರಣವಾಗಿದೆ. ರಿಸಲ್ಟ್ ನಲ್ಲಿ ನಮ್ಮ ಕೆಲವು ಪೂರ್ವಜರನ್ನು ಗುರುತು ಹಿಡಿಯಲು ಸಾಧ್ಯವಾಗಲೇ ಇಲ್ಲ. ಆದ್ರೆ ನಮ್ಮ ಕುಟುಂಬದಲ್ಲಿ ಒಬ್ಬ ಕುಖ್ಯಾತ ಸಿರಿಯಲ್ ಕಿಲ್ಲರ್ ಇದ್ದ ಅಂತ ಟೆಸ್ಟ್ ರಿಸಲ್ಟ್ ಹೇಳಿ ಬಿಡ್ತು. ಇಷ್ಟು ವಿಷಯ ಸಾಕಾಯ್ತು ನಮ್ಮ ಬ್ರೇಕಪ್ ಗೆ ಅಂಥ ಆತ ಬರೆದುಕೊಂಡಿದ್ದಾನೆ. ನಿನ್ನನ್ನು ಬಹಳ ಪ್ರೀತಿಸುತ್ತೇನೆ.‌ ಆದ್ರೆ ನಿಮ್ಮ ಕುಟುಂಬಕ್ಕೆಅಂಟಿರುವ ಕಳಂಕದ ಜೊತೆ ಇರಲು ಸಾಧ್ಯವಿಲ್ಲ ಎಂದು ಹೇಳಿಬಿಟ್ಟಳಂತೆ ಅವನ ಪ್ರಿಯತಮೆ.

ಫ್ರೆಶ್ ನ್ಯೂಸ್

Latest Posts

Featured Videos