ಡಿಕೆ ಶಿವಕುಮಾರ್‌ ಮೇಲೆ ಹೆಚ್ಡಿಕೆಗೆ ಹಗೆತನ ಹೀಗಿನದಲ್ಲಾ: ಡಿಕೆ ಸುರೇಶ್

ಡಿಕೆ ಶಿವಕುಮಾರ್‌ ಮೇಲೆ ಹೆಚ್ಡಿಕೆಗೆ ಹಗೆತನ ಹೀಗಿನದಲ್ಲಾ: ಡಿಕೆ ಸುರೇಶ್

ರಾಮನಗರ: ದಶಕಗಳಿಂದ ನಮ್ಮ ಕುಟುಂಬದೊಂದಿಗೆ ದೇವೇಗೌಡರ ಕುಟುಂಬ ಹಗೆತನ ಸಾಧಿಸುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, ಒಕ್ಕಲಿಗ ನಾಯಕತ್ವ ಯಾರ ಸ್ವತ್ತಲ್ಲ, ಒಕ್ಕಲಿಗರು ಸ್ವಾಭಿಮಾನಿಗಳು ಮತ್ತು ಯಾವ ಸರ್ಕಾರಕ್ಕೆ ಬೆಂಬಲಿಸಬೇಕು ಅನ್ನೋದನ್ನು ಚೆನ್ನಾಗಿ ತಿಳಿದಿದ್ದಾರೆ.

ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ, ಎಲ್ಲ ಸಮುದಾಯಗಳನ್ನು ಜೊತೆಯಾಗಿ ಕರೆದೊಯ್ಯುವ ಜವಾಬ್ದಾರಿ ಅವರ ಮೇಲಿದೆ. ಕುಮಾರಸ್ವಾಮಿ ಅವರು ಹೇಳೋದೆಲ್ಲ ಸತ್ಯವೇ? ಅಸಲಿಗೆ ದೇವೇಗೌಡರ ಕುಟುಂಬಕ್ಕೆ ದಶಕಗಳಿಂದ ಶಿವಕುಮಾರ್ ಕುಟುಂಬದೊಂದಿಗೆ ಹಗೆತನವಿದೆ, ಅದರೆ ತಮ್ಮ ಕುಟುಂಬ ಯಾವತ್ತೂ ಹಗೆ ಸಾಧಿಸಿಲ್ಲ, ಅವರು ಅಧಿಕಾರದಲ್ಲಿದ್ದಾಗ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ ಎಂದು ಡಿ.ಕೆ ಸುರೇಶ್ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos