ರಾಜಕೀಯ ನಿವೃತ್ತಿ ಸವಾಲು ಹಾಕಿದ ಡಿಕೆ ಶಿವಕುಮಾರ್

ರಾಜಕೀಯ ನಿವೃತ್ತಿ ಸವಾಲು ಹಾಕಿದ ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಾಜಪ ಇತ್ತೀಚಿನ ದಿನಗಳಲ್ಲಿ 5 ಪ್ರಮುಖ ಗ್ಯಾರಂಟಿ ಯೋಜನೆಗಳ ಬಗ್ಗೆ ನೆಗಿಟೀವ್ ಆಗಿ ಮಾತನಾಡಿದ ಬಿಜೆಪಿ ಪಡೆ ಕೈಕೊಟ್ಟ ಯೋಜನೆಗಳು, ಹಳಿತಪ್ಪಿದ ಆಡಳಿತ, ದಿಕ್ಕು ತಪ್ಪಿದ ಸರ್ಕಾರ. ತುಘಲಕ್ ದರ್ಬಾರಿನ ಸರ್ಕಾರ. ಇದು ನೂರು ದಿನ ಪೂರೈಸಿರೋ ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟಿರೋ ಬಿರುದುಗಳು.. ಶತಕ ಬಾರಿಸಿದ ಸಂಭ್ರಮದಲ್ಲಿರೋ ನೂತನ ಸರ್ಕಾರದ ವಿರುದ್ಧ ವೈಫಲ್ಯಗಳ ಸರಮಾಲೆಯ ಜಾರ್ಜ್ ಶೀಟ್ ಬಿಡುಗಡೆ ಮಾಡಿದ್ದು,ಈ ಆರೋಪಕ್ಕೆ ಇದೀಗ ಕಾಂಗ್ರೆಸ್ ತಿರುಗೇಟು ನೀಡಿದೆ. ಇನ್ನು ಡಿಕೆ ಶಿವಕುಮಾರ್ ಅವರು ರಾಜಕೀಯ ನಿವೃತ್ತಿ ಸವಾಲು ಹಾಕಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಬಿಜೆಪಿ ಮಾಡಿರುವ ಆರೋಪ ಸಾಬೀತು ಮಾಡಲಿ. ಇವರು ಬಿಜೆಪಿ ಸರ್ಕಾರ ಇದ್ದಾಗ ಮಾಡಿರುವ ಹಗರಣಗಳನ್ನು ಬಿಚ್ಚಿ ಇಡೋ ಕಾಲ ಬರುತ್ತದೆ. ನನ್ನ ಮೇಲಿನ ಆರೋಪ ಸಾಬೀತು ಮಾಡಿದರೆ. ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ. ಎಂದು ಸವಾಲು ಹಾಕುವ ಮೂಲಕ ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದರು.
ನೂರು ದಿನದಲ್ಲಿ ಈಗಾಗಲೇ 4 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಮಾತುಕೊಟ್ಟಂತೆ ಮೊದಲ ಕ್ಯಾಬಿನೆಟ್ನಲ್ಲೇ ಎಲ್ಲಾ ಗ್ಯಾರಂಟಿ ಇತ್ಯರ್ಥ ಮಾಡಿದ್ದೇವೆ. ಬಿಜೆಪಿಯವರದ್ದು ಭರವಸೆ, ನಮ್ಮದು ಗ್ಯಾರಂಟಿ. ಇಂದು ಗೃಹಲಕ್ಷ್ಮೀ ಯೋಜನೆಗೆ ಇಂದು ಚಾಲನೆ ನೀಡುತ್ತಿದ್ದು, ನಾಡಿನೆಲ್ಲೆಡೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ, ಎಲ್ಲರ ಮನೆಗಳಲ್ಲಿ ಹೆಣ್ಣು ಮಕ್ಕಳು ಹಬ್ಬದ ಸಂಭ್ರಮದಲ್ಲಿದ್ದಾರೆ. ಇಲ್ಲಿಗೆ 1.10 ಕೋಟಿ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ, ಸಿಎಂ ಸಿದ್ದರಾಮಯ್ಯ, ನಾನು ಚೆಕ್ಗೆ ಸಹಿ ಹಾಕಿದ್ದು, ಯಜಮಾನಿಯರ ಬ್ಯಾಂಕ್ ಖಾತೆಗೆ 2000 ರೂ ಹಣ ಜಮಯಾಗುವುದು ಗ್ಯಾರಂಟಿ ಎಂದರು.
ವರದಿಗಾರ
ಎ.ಚಿದಾನಂದ,ವಿಜಯನಗರ.

ಫ್ರೆಶ್ ನ್ಯೂಸ್

Latest Posts

Featured Videos