ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ: HDK ಹೇಳಿಕೆಗೆ ಡಿಕೆ ಶಿವಕುಮಾರ್​ ವಾಗ್ದಾಳಿ

ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ: HDK ಹೇಳಿಕೆಗೆ ಡಿಕೆ ಶಿವಕುಮಾರ್​ ವಾಗ್ದಾಳಿ

ತುಮಕೂರು: ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ವಿರುದ್ದ ಹಲವಾರು ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್​ನಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ನೀನು ಒಂದು ತಾಯಿ‌ ಹೊಟ್ಟೆಯಲ್ಲಿ‌ ಹುಟ್ಟಿದ್ದೀಯಾ. ಆ ತಾಯಿಯ ನೋವು ಅರ್ಥ ಆಗುತ್ತಾ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್​ ತೀವ್ರ ವಾಗ್ದಾಳಿ ಮಾಡಿದ್ದಾರೆ. ಕುಮಾರಸ್ವಾಮಿ ಹೇಳಿಕೆಯಿಂದ ನನಗೆ ಇಂದು ಅತಿ ಹೆಚ್ಚು ದುಃಖ ತಂದಿದೆ. ನನ್ನ ತಾಯಂದಿರು, ಅಕ್ಕಂದಿರು, ಅವರ ತಾಯಿಯ ಮನೆಗೆ ಹೋಗೋಕೆ, ಧರ್ಮಸ್ಥಳ, ಕುಕ್ಕೆಗೆ‌ ಹೋಗಲು ಬಸ್‌ ಹಿಡಿದ್ರೆ ದಾರಿ‌ತಪ್ಪಿದ್ದಾರೆ ಅಂತೀರಾ? ಅವರ ಕ್ಷಮೆ ಕೇಳಿ ಅಂತಾ ಹೇಳಲ್ಲ. ಕ್ಷಮಿಸಲು ಯಾರಿಂದಲೂ ಆಗಲ್ಲ ಎಂದು ಹೇಳಿದ್ದಾರೆ.

ಮಾನ್ಯ ಕುಮಾರಸ್ವಾಮಿ, ದೇಶದ ಪ್ರಧಾನಿಯಾಗಿದ್ದ ದೇವೇಗೌಡರ ಮಗ. ಈ ಭೂಮಿಲಿ ದೊಡ್ಡ ಸ್ಥಾನ ಹೊತ್ತ ದೊಡ್ಡ ಕುಟುಂಬ. ಜನರ ಬದುಕಿಗೆ ಶಕ್ತಿ ಕೊಡಬೇಕು ಅಂತಾ ಜನರಿಗೆ 5 ಗ್ಯಾರಂಟಿ ನೀಡಿದ್ದೇವೆ. ಧೀಮಂತ ಮಹಿಳೆ ಇಂದಿರಾಗಾಂಧಿ ನಿಧನರಾದಾಗ ಮನಸ್ಸಿಗೆ ನೋವಾಗಿತ್ತು. ಅದು ಆದ್ಮೆಲೇ ಇಂದು ಮನಸ್ಸಿಗೆ ದುಃಖವಾಗುತ್ತಿದೆ. ಈಗಾಗಲೇ ಹೆಣ್ಣುಮಕ್ಕಳು ಪ್ರತಿಭಟನೆ ಆರಂಭಿಸಿದ್ದಾರೆ. ದೇಶದೆಲ್ಲೆಡೆ ಹೊತ್ತಿಕೊಂಡು‌ ಉರಿಯುತ್ತಿದೆ ಎಂದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos