‘ರಾಜಕೀಯ ನಿವೃತ್ತಿ’ಯ ಸುಳಿವು ನೀಡಿದ ಡಿಕೆಶಿ..!

‘ರಾಜಕೀಯ ನಿವೃತ್ತಿ’ಯ ಸುಳಿವು ನೀಡಿದ ಡಿಕೆಶಿ..!

ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆ  ರಂಗೇರಿದ್ದು ರಾಜ್ಯದೆಲ್ಲೆಡೆ ನಾಮಪತ್ರ ಸಲ್ಲಿಕೆ ಮುಗಿದಿದ್ದು ಅಭ್ಯರ್ಥಿಗಳು ಮತಯಾಚನೆ ನಡೆಸುತ್ತಿದ್ದಾರೆ. ರಾಜಕಾರಣದಲ್ಲಿ ಎಷ್ಟು ದಿನ ಇರ್ತೇನೆ ಗೊತ್ತಿಲ್ಲಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದು, ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರಾ..? ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ ನಾನು ಎಷ್ಟು ದಿನ ಇರ್ತೇನೆ ಗೊತ್ತಿಲ್ಲ, ನೀವು ಕೆಲಸ ಮಾಡಬೇಕು.

ನೂತನ ಕಾರ್ಯಾಧ್ಯಕ್ಷರು ವಿಸಿಟ್ ಕಾರ್ಟ್ ಇಟ್ಟುಕೊಂಡು ಓಡಾಡಿದರೆ ಆಗಲ್ಲ ಕೆಲಸ ಮಾಡಬೇಕು, ಕೆಲಸ ಮಾಡಿಲ್ಲ ಎಂದರೆ ಎಲೆಕ್ಷನ್ ಮುಗಿದ ಬಳಿಕ ನೀವು ಮಾಜಿಗಳಾಗುತ್ತೀರಿ ಎಂದರು. ನಿಮ್ಮದೇ ಕಾರು ಬಳಸಿಕೊಂಡು ಸುತ್ತಾಡಬೇಕು ಎಂಬಿತ್ಯಾದಿ ಸಲಹೆ ಸೂಚನೆಗಳನ್ನು ನೀಡಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಜರಾಜೇಶ್ವರಿ ನಗರದಲ್ಲಿ ಇಂದು ನನ್ನ ಧರ್ಮಪತ್ನಿ ಶ್ರೀಮತಿ ಉಷಾ ಅವರು ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಡಿ.ಕೆ.ಸುರೇಶ್ ಅವರ ಪರ ಮತ ಯಾಚಿಸಿದರು. ಕ್ಷೇತ್ರದ ಜನತೆ ಈ ಬಾರಿ ನಮ್ಮ ಅಭ್ಯರ್ಥಿಯನ್ನು ಹಿಂದಿಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಡಿಕೆಶಿ ಹೇಳಿದರು.

ರಾಣೇಬೆನ್ನೂರಿನ ಮಾಜಿ ಶಾಸಕರಾದ ಆರ್. ಶಂಕರ್ ಅವರು ಇಂದು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ತೊರೆದು ನಮ್ಮ ಪಕ್ಷದ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಮುಂದಿನ ರಾಜಕೀಯ ಜೀವನ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos