ರಾಜ್ಯದಲ್ಲಿ ಜೆಡಿಎಸ್ ಇರಲ್ಲಾ: ಡಿಸಿಎಂ

ರಾಜ್ಯದಲ್ಲಿ ಜೆಡಿಎಸ್ ಇರಲ್ಲಾ: ಡಿಸಿಎಂ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು ರಾಜ್ಯದಲ್ಲೇ ಅಭ್ಯರ್ಥಿಗಳು ಮತ ಭೇಟಿಯಾಚಿಸಲು ರ್ಯಾಲಿ ಮಾಡುತ್ತಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಜೆಡಿಎಸ್ ಅಭ್ಯರ್ಥಿಗಳಲ್ಲಿ ಮನಸ್ತಾಪ ಉಂಟಾಗಿದ್ದು, ಇದರಿಂದ ಜೆಡಿಎಸ್ ಅಭ್ಯರ್ಥಿಗಳು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.

ರಾಜ್ಯದಲ್ಲಿ ಇನ್ಮುಂದೆ ಜೆಡಿಎಸ್ ಇರೋದಿಲ್ಲ. ಬಹಳಷ್ಟು ನಾಯಕರು ಜೆಡಿಎಸ್‌ನಿಂದ ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ಯಾರು ಮೈತ್ರಿ ಸರ್ಕಾರ ಕಿತ್ತು ಹಾಕಿದರೋ ಅವರ ಜತೆಗೆ ನೆಂಟಸ್ತಿಕೆ ಮಾಡಿಕೊಂಡಿದ್ದಾರೆ. ಎಂತಹ ನೀಚ ರಾಜಕೀಯ ನಡೆಯುತ್ತಿದೆ ಅಂತಾ ಜೆಡಿಎಸ್ ಕಾರ್ಯಕರ್ತರು‌ ಬೇಸರಗೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ, ಕೋಲಾರ ಭಾಗದ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಕ್ಕಲಿಗರಿಗೆ ಹೆಚ್ಚು ಸೀಟ್ ಕೊಟ್ಟಿದೆ. ದಳದವರು ಕೇವಲ ಕುಟುಂಬದವರಿಗೆ ಟಿಕೆಟ್ ಕೊಟ್ಟಿದ್ದಾರೆ. ಮುಂದೆ ರಾಜ್ಯದಲ್ಲಿ ಜೆಡಿಎಸ್ ಇರುವುದಿಲ್ಲ ಎಂದರು.

ಸಚಿವ ಕೃಷ್ಣಬೈರೇಗೌಡ ಮಾತಮಾಡಿ, ಜೆಡಿಎಸ್‌ನ ಮಾಜಿ ಶಾಸಕ ಕೆ.ಪಿ ಬಚ್ಚೇಗೌಡರು‌ ಜೆಡಿಎಸ್ ಇನ್ನು ಮುಂದೆ ಇರೋದಿಲ್ಲ ಎಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಕುಮಾರಣ್ಣ ಯಾಕೆ ಹೋಗಿ ಬಿಜೆಪಿಯವರ ಸಹವಾಸ ಮಾಡಿದರೋ ಗೊತ್ತಿಲ್ಲ. ಬಿಜೆಪಿಯವರ ವರಸೆನೆ ಹಾಗೇ, ಎಲ್ಲಾ ಸೇರಿಸಿಕೊಂಡು ಕೊನೆಗೆ ಜೆಡಿಎಸ್​​ನ್ನು ನೇತು ಹಾಕಿ ಹೋಗಿ ಬಿಡುತ್ತಾರೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos