ಮನೆ ಕಟ್ಟುವರಿಗೆ ದೀಪಾವಳಿ ಕೊಡುಗೆ

ಮನೆ ಕಟ್ಟುವರಿಗೆ ದೀಪಾವಳಿ ಕೊಡುಗೆ

ಬೆಂಗಳೂರು, ಅ.25: ಎರಡು ಸಾವಿರ ನಾನೂರು ಚದರಡಿಗಿಂತ ಕಡಿಮೆ ಇರುವ ನಿವೇಶನಗಳಲ್ಲಿ ಮನೆ ಕಟ್ಟುವವರಿಗೆ ಬಿಬಿಎಂಪಿ ದೀಪಾವಳಿಯ ಉಡುಗೊರೆ ನೀಡಿದೆ.

ಈ ಮೊದಲು 30/4೦ ವಿಸ್ತಿರ್ಣಕ್ಕಿಂತ ಮೇಲ್ಪಟ್ಟ ನಿವೇಶನದಲ್ಲಿ ಕಟ್ಟಬೇಕಾದರೆ ಪಾಲಿಕೆಯಿಂದ ಮಂಜೂರಾತಿ ಪ್ಲಾನ್ ಪಡೆಯ ಬೇಕಿತ್ತು. ಅಧಿಕಾರಿಗಳ ಕೈ ಬಿಸಿ ಮಾಡಬೇಕು, ಪ್ಲಾನ್ ಅಪ್ರೂವ್ ಆಗುವತನಕ ಮನೆ ಕಟ್ಟುವಂತಿಲ್ಲ, ಸದಾ ಪಾಲಿಕೆಗೆ ಅಲೆಯಬೇಕು-ಹೀಗೆ ಜನರನ್ನು ಚಿಂತೆ ಕಾಡುತ್ತಿದ್ದವು.

ಇನ್ನು ಮುಂದೆ 6೦/4೦ ನಿವೇಶನದೊಳಗಿನವರು ಕೂಡ ನಕ್ಷೆ ಮಂಜೂರಾತಿಗಾಗಿ ಅನುಮತಿ ಪಡೆಯುವ ಅಗತ್ಯವಿಲ್ಲ. ಸರ್ಕಾರಕ್ಕೆ ಪಾವತಿಸುವ ಶುಲ್ಕದಲ್ಲೂ ವಿನಾಯಿತಿ ನೀಡಲಾಗುತ್ತದೆ. ಸರ್ಕಾರ ಅನುಮೋದನೆ ನೀಡಿದ್ದು, ದೀಪಾವಳಿ ಹಬ್ಬದ ವೇಳೆಗೆ ಆದೇಶ ಹೊರಬೀಳಲಿದೆ ಎಂದು ಮೇಯರ್ ಗೌತಮ್ಕುಮಾರ್ ಜೈನ್ ಸುದ್ದಿಗಾರರಿಗೆ ತಿಳಿಸಿದರು.

ನಕ್ಷೆ ಮಂಜೂರಾತಿ ಪಡೆಯಲು ಬಡ ವರ್ಗದ ಜನರಿಗೆ ಆಗುತ್ತಿದ್ದ ತೊಂದರೆ ತಪ್ಪಿಸಲು ಕೇಂದ್ರ ಸರ್ಕಾರ ೬೦/೪೦ ಅಳತೆಯ ಒಳಗಿನ ನಿವೇಶನದಲ್ಲಿ ಮನೆ ಕಟ್ಟುವವರಿಗೆ ಯಾವುದೇ ಅನುಮತಿ ಬೇಕಿಲ್ಲ ಎಂದು ಸ್ವಾತಂತ್ರ‍್ಯ ದಿನಾಚರಣೆಯಂದು ಘೋಷಿಸಿತ್ತು.  ಯೋಜನೆಯನ್ನು ರಾಜ್ಯ ಸರ್ಕಾರ ಸಾಕಾರಗೊಳಿಸಿದ್ದು, ಒಂದೆರಡು ದಿನಗಳಲ್ಲಿ ಆದೇಶ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂದು ಹೇಳಿದರು.

ಗೊತ್ತಿರುವ ವಿನ್ಯಾಸಗಾರರಿಂದ ಪ್ಲಾನ್ ಸಿದ್ಧಪಡಿಸಿ ಆನ್‌ಲೈನ್ ಅಪ್ಲೋಡ್ ಮಾಡಿದರೆ ಸಾಕು. ನಿರ್ಭೀತಿಯಿಂದ ಮನೆ ಕಟ್ಟಲು ಪ್ರಾರಂಭಿಸಬಹುದು. ನಿವೇಶನ ಇದ್ದೂ ಮನೆ ಕಟ್ಟಲು ಪರಿತಪಿಸುವ ನಾಗರಿಕರಿಗೆ ಇದು ದೀಪಾವಳಿ ಗಿಫ್ಟ್ ಆಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos