ಹನಿಮೂನ್‌ ಆದ ತಕ್ಷಣ ವಿಚ್ಚೇದನ ಕೋರಿದ ಮಹಿಳೆ!

ಹನಿಮೂನ್‌ ಆದ ತಕ್ಷಣ ವಿಚ್ಚೇದನ ಕೋರಿದ ಮಹಿಳೆ!

ಏ. 12, ನ್ಯೂಸ್ ಎಕ್ಸ್ ಪ್ರೆಸ್: ಸಾಮಾನ್ಯವಾಗಿ ಮಹಿಳೆಯರು ಗಂಡನಿಂದ ವಿವಾಹ ವಿಚ್ಛೇದನ ಪಡೆಯಲು ಕಾರಣವೇನಿರಬಹುದು, ಗಂಡ ಚೆನ್ನಾಗಿ ನೋಡಿಕೊಳ್ಳುವುದಿಲ್ಲವೆಂಬುದೇ ಮಹಿಳೆಯರ ಬಹುಮುಖ್ಯ ಕಾರಣವಾಗಿರುತ್ತದೆ. ಇದು ಸಾಮಾನ್ಯವಾಗಿ ಎಲ್ಲಾ ದೇಶದಲ್ಲಿ ನಡೆಯುವ ಸಾಮಾನ್ಯ ಸಂಗತಿ. ಆದರೆ ಯುಎಇಯಲ್ಲಿ ಮಹಿಳೆಯೋರ್ವಳು ಗಂಡನ ಹಣದ ವ್ಯಾಮೋಹದ ಕಾರಣ ಆತನೊಂದಿಗೆ ದಾಂಪತ್ಯ ಜೀವನವನ್ನ ಮುರಿದುಕೊಳ್ಳಲು ಮುಂದಾಗಿದ್ದಾರೆ. ತನ್ನ ಗಂಡ ಮದುವೆಯ ಸಂದರ್ಭದಲ್ಲಿಯೂ ನನ್ನ ಕೈಯಿಂದಲೇ ಹಣ ಖರ್ಚು ಮಾಡಿಸಿದ್ದಾನೆ. ಅಷ್ಟೆ ಅಲ್ಲದೆ ಆತ ಮನೆಗೆ ಬೇಕಾಗುವ ತರಕಾರಿಯಿಂದ ಹಿಡಿದು ವಿದ್ಯುಚ್ಛಕ್ತಿ ಬಿಲ್, ನೀರಿನ ಬಿಲ್ ಗಳನ್ನೂ ನನ್ನಿಂದಲೇ ಪಾವತಿಯಾಗುವಂತೆ ನೋಡಿಕೊಂಡಿದ್ದಾನೆ. ನನ್ನ ಗಂಡ ನನಗಿಂತ 13 ವರ್ಷ ಚಿಕ್ಕವನಾಗಿದ್ದು ಆತನ ದುರಾಸೆ ವ್ಯಕ್ತಿತ್ವ ಆತನನ್ನ ತುಚ್ಚನನ್ನಾಗಿಸಿದೆ. ಹಾಗಾಗಿ ಆತನಿಂದ ವಿಚ್ಛೇದನ ಬಯಸಿ ಮಹಿಳೆ ಅಬುದಾಬಿ ನ್ಯಾಯಾಲಯದ ಕಟಕಟೆ ಹತ್ತಿದ್ದಾಳೆ. ಮನೆಗೆ ಬೇಕಾದ ಫರ್ನೀಚರ್ಸ್ ಗಳನ್ನ ನನ್ನ ಹಣದಿಂದಲೇ ಖರೀದಿಸಲಾಗಿದೆ, ಮನೆಗೆ ಬೇಕಾದ ಎಲ್ಲಾ ವಸ್ತುಗಳಿಗೆ ನಾನೇ ವ್ಯಯ ಮಾಡಿದರೂ ಸಹ ಆತ ನನ್ನನ್ನ ಚೆನ್ನಾಗಿ ನೋಡಿಕೊಂಡಿಲ್ಲ. ಆತ ನನ್ನನ್ನ ನಿರ್ಲಕ್ಷಿಸಿದ್ದಾನೆ. ಹಾಗಾಗಿ ಆತನಿಂದ ವಿವಾಹ ವಿಚ್ಛೇದನ ಬೇಕು ಅನ್ನುತ್ತಿದ್ದಾಳೆ ಆ ಮಹಿಳೆ. ಹಣದ ಬಗ್ಗೆ ಹುಚ್ಚು ಹಿಡಿಸಿಕೊಂಡಿರುವ ತನ್ನ ಗಂಡನಿಂದ ರೋಸಿ ಹೋಗಿರುವ ನನಗೆ ವಿವಾಹ ವಿಚ್ಛೇದನ ಕೊಡಿಸಿ ಎಂದು ಮಹಿಳೆ ಕೋರಿದ್ದಾಳೆ.

ಫ್ರೆಶ್ ನ್ಯೂಸ್

Latest Posts

Featured Videos