ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಣೆ

ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಣೆ

ಮಧುಗಿರಿ:ಮಕ್ಕಳನ್ನು ಪರೀಕ್ಷೆಗಳಲ್ಲಿ ದೊರೆಯುವ ಅಂಕಗಳಿಗೆ ಸೀಮಿತಗೊಳಿಸದೆ ಸಂಸ್ಕಾರಗಳನ್ನು ಕಲಿಸುವ ಜವಾಬ್ದಾರಿ ಪೋಷಕರಿಗಿದೆ ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ತುಮುಲ್ ಕಚೇರಿಯಲ್ಲಿ ಫಲಾನುಭವಿಗಳಿಗೆ ವಿವಿಧ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು. ಬಡತನ ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಪರಿಹಾರ ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ತಾಲೂಕು ನಿರಂತರವಾಗಿ ಬರಗಾಲ ಪೀಡಿತ ಪ್ರದೇಶವಾಗಿದ್ದು, ದೇವರ ಕೃಪೆಯಿಂದ ಈ ಬಾರಿ ಮುಂಗಾರು ಉತ್ತಮವಾಗಿ ಆರಂಭವಾಗಿದ್ದು, ಮೇವಿನ ಕೊರತೆ ಕಂಡು ಬಂದಿಲ್ಲ ಈ ಬಾರಿ ಉತ್ತಮ ಮುಂಗಾರು ಕಂಡು ಬಂದಿದ್ದು, ಹೊಲದ ಬದುಗಳಲ್ಲಿ ಹೆಚ್ಚಾಗಿ ಹುಲ್ಲು ಬೆಳೆದಿರುವುದು ಹೈನುಗಾರಿಕೆಗೆ ವರದಾನವಾಗಿದೆ. ಎಂದರು.

ಇಂದು ತುಮುಲ್ ಒಕ್ಕೂಟವು ಆರ್ಥಿಕವಾಗಿ ಸಧೃಡವಾಗಿದ್ದು, ಎಷ್ಟೇ ಹಾಲು ಬಂದರೂ ಖರೀದಿಸುವ ಶಕ್ತಿ ಇಂದು ತುಮುಲ್‌ಗಿದೆ ತಾಲೂಕಿನ ಎಲ್ಲಾ ಡೈರಿಗಳಲ್ಲೂ ಹಾಲು ಉತ್ಪಾದಕ ರೈತರು ಖಡ್ಡಾಯವಾಗಿ ಮಾಸ್ಕ್ ಧರಿಸಿ ಹಾಲು ವಿತರಿಸಬೇಕಿದೆ ರೈತರು ಸೊಂಕಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನಾದ್ಯಂತ ಎಲ್ಲಾ ಹಾಲು ಉತ್ಪಾದಕ ರೈತರಿಗೂ ೧೦೫೦೦ ಮಾಸ್ಕ್ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಈಗಾಗಲೇ ದೊಡ್ಡೇರಿ, ಮಿಡಿಗೇಶಿ ಮತ್ತು ಐ.ಡಿ. ಹಳ್ಳಿ ಮತ್ತು ಕಸಬಾ ಹೋಬಳಿಯ ರೈತರಿಗೆ ವಿತರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ೩೦ ರಾಸುಗಳಿಗೆ ತಲಾ ೫೦ ಸಾವಿರದಂತೆ ೧೫ ಲಕ್ಷ ರೂಗಳ ರಾಸು ವಿಮೆ, ಅಕಾಲಿಕವಾಗಿ ಮೃತ ಪಟ್ಟ ೬ ಜನ ಸದಸ್ಯರ ಕುಟುಂಬದವರಿಗೆ ತಲಾ ೫೦ ಸಾವಿರ ದಂತೆ ೩ ಲಕ್ಷ ರೂಗಳ ಪರಿಹಾರ, ಬೇಡತ್ತೂರು ಸಂಘಕ್ಕೆ ಕಟ್ಟಡ ನಿರ್ಮಾಣಕ್ಕೆ ಮೊದಲ ಕಂತಿನಲ್ಲಿ ೧ ಲಕ್ಷ ರೂಗಳ ಚೆಕ್ ಗಳನ್ನು ವಿತರಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos