ವಿಭಿನ್ನ ಉಡುಪಿನಲ್ಲಿ ದೀಪಿಕಾ ಮಿಂಚು

ವಿಭಿನ್ನ ಉಡುಪಿನಲ್ಲಿ ದೀಪಿಕಾ ಮಿಂಚು

ಮುಂಬೈಜೂನ್.10, ನ್ಯೂಸ್ ಎಕ್ಸ್ ಪ್ರೆಸ್: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಪತಿ, ನಟ ರಣ್‍ವೀರ್ ಸಿಂಗ್‍ರಂತೆ ಉಡುಪು ಧರಿಸಿ ಟ್ರೋಲ್ ಆಗುತ್ತಿದ್ದಾರೆ. ದೀಪಿಕಾ ಪಡುಕೋಣೆ ಲಂಡನ್‍ಗೆ ಹೋಗುತ್ತಿದ್ದರು. ವಿಮಾನ ನಿಲ್ದಾಣದಲ್ಲಿ ದೀಪಿಕಾ ಬಿಳಿ ಬಣ್ಣದ ಟೀ-ಶರ್ಟ್ ಧರಿಸಿ ಅದಕ್ಕೆ ನಿಯಾನ್ ಪ್ಯಾಂಟ್ ಹಾಗೂ ಲಾಂಗ್ ಜಾಕೆಟ್ ವಿಭಿನ್ನ ಗೆಟಪ್‍ನಲ್ಲಿ ಮಿಂಚಿದ್ದಾರೆ.

ಈ ಲುಕ್ ನೋಡಿ ಅಭಿಮಾನಿಗಳು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಅಲ್ಲದೆ ಈ ಉಡುಪಿಗ ಅವರು ಮೇಕಪ್ ಹಾಕಿದ್ದರು. ದೀಪಿಕಾರ ಈ ಲುಕ್ ನೋಡಿ ಅಭಿಮಾನಿಗಳು ಆಶ್ಚರ್ಯಗೊಂಡರು. ದೀಪಿಕಾ ತನ್ನ ಪತಿ ರಣ್‍ವೀರ್ ಸಿಂಗ್ ಜೊತೆ ಇದ್ದು, ಅವರಂತೆ ಪ್ರಭಾವಗೊಂಡಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ವಾಸ್ತವವಾಗಿ ಈಗ ನೀವು ಮಿಸೆಸ್ ರಣ್‍ವೀರ್ ಸಿಂಗ್ ರೀತಿ ಕಾಣುತ್ತಿದ್ದೀರಿ ಎಂದು ಕಮೆಂಟ್ ಮಾಡುವ ಮೂಲಕ ಟ್ರೋಲ್ ಆಗುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos