ದೀಪ ಬೆಳಗಿ ದೀಪಾವಳಿ ಆಚರಿಸಿದ ಟ್ರಂಪ್ ..!

ದೀಪ ಬೆಳಗಿ ದೀಪಾವಳಿ ಆಚರಿಸಿದ ಟ್ರಂಪ್ ..!

ನ್ಯೂಯಾರ್ಕ್, ಅ. 28 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಲ್ಲಿನ ಭಾರತೀಯ ಸಮುದಾಯಕ್ಕೆ ದೀಪಾವಳಿ ಹಬ್ಬದ ಶುಭಾಶಯ ಹೇಳಿದ್ದಾರೆ.
ಓವಲ್ ಕಚೇರಿಯಲ್ಲಿ ಕೆಲವು ಭಾರತೀಯರು ಹಾಗೂ ಅಮೆರಿಕನ್ನರೊಂದಿಗೆ ಸೇರಿ ಟ್ರಂಪ್ ದೀಪ ಬೆಳಗುವ ಮೂಲಕ ದೀಪಾವಳಿ ಹಬ್ಬ ಆಚರಿಸಿದರು. ವಿಡಿಯೋ ತುಣುಕನ್ನು ಟ್ವಿಟರ್ನಲ್ಲಿ ಶೇರ್ ಮಾಡಿ ಶುಭಕೋರಿದ್ದಾರೆ.
ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸುತ್ತಿರುವ ಎಲ್ಲರಿಗೂ ನಾನು ಹಾಗೂ ಮೆಲಿನಾ ಶುಭಾಶಯ ಕೋರುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ಹಬ್ಬ ಆಚರಣೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಪವಿತ್ರ ಸಂಪ್ರದಾಯಗಳ ಆಚರಣೆ ಜನರನ್ನು, ಸಮುದಾಯವನ್ನು ಒಗ್ಗೂಡಿಸುತ್ತದೆ. ಇದರಿಂದ ದೇಶವೂ ಬಲಗೊಳ್ಳುತ್ತದೆ. ಈ ದೀಪಾವಳಿಯ ಬೆಳಕು ಪ್ರತಿಯೊಬ್ಬರ ಬದುಕಲ್ಲೂ ಒಳಿತನ್ನು ತರಲಿ ಎಂದು ಹಾರೈಸಿದರು.

ಫ್ರೆಶ್ ನ್ಯೂಸ್

Latest Posts

Featured Videos