ನಿಜಜೀವನದಲ್ಲೂ ಕ್ರಿಕೆಟಿಗನಾದ ದಿಗ್ವಿಜಯ್

ನಿಜಜೀವನದಲ್ಲೂ ಕ್ರಿಕೆಟಿಗನಾದ ದಿಗ್ವಿಜಯ್

ನವದೆಹಲಿ, ಡಿ. 22: 2013ರಲ್ಲಿ ಬಿಡುಗಡೆಯಾಗಿ ಸೂಪರ್​ಹಿಟ್ ಆಗಿದ್ದ ‘ಕೈ ಪೊ ಚೇ?’ ಸಿನಿಮಾದಲ್ಲಿ ಬಾಲ ಕಲಾವಿದನಾಗಿದ್ದ ದಿಗ್ವಿಜಯ್ ಐಪಿಎಲ್ ಕ್ರಿಕೆಟಿಗರಾಗಿದ್ದಾರೆ.

21 ವರ್ಷದ ಆಲ್ರೌಂಡರ್ ದಿಗ್ವಿಜಯ್, ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂ. ಮೂಲಬೆಲೆಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ. ಕ್ರಿಕೆಟಿಗನಾಗುವ ಕನಸು ಕಾಣುವ ಹುಡುಗ ಅಲಿ ಹಶ್ಮಿ ಪಾತ್ರ ನಿಭಾಯಿಸಿದ್ದರು. ಕ್ರಿಕೆಟ್ ರಾಜಕೀಯಕ್ಕೆ ವೃತ್ತಿಜೀವನ ಕೆಡಿಸಿಕೊಂಡಿದ್ದ ಇಶಾನ್  ತರಬೇತಿಯಲ್ಲಿ ಪಳಗಿ ಕೊನೆಗೆ ಭಾರತ ಪರ ಆಡುವ ಕಥಾವಸ್ತು, 6 ವರ್ಷಗಳ ಬಳಿಕ ನಿಜಜೀವನದಲ್ಲೂ ಸಿನಿಮಾದಂತೆಯೇ ಕನಸು ನನಸಾಗಿದೆ.

ತವರು ಮೈದಾನ ಪುಣೆಯಲ್ಲಿ ಮಹಾರಾಷ್ಟ್ರ ಪರ ರಣಜಿ ಪದಾರ್ಪಣೆಯನ್ನೂ ಮಾಡಿರುವ ದಿಗ್ವಿಜಯ್, ಜಮ್ಮು-ಕಾಶ್ಮೀರ ವಿರುದ್ಧ 6 ವಿಕೆಟ್ ಮತ್ತು 85 ರನ್ ಗಳಿಸಿ ಮಿಂಚಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos