ಡಿಜಿಟಲ್ ಸೇವೆ: ಶ್ಲಾಘನೆ

ಡಿಜಿಟಲ್ ಸೇವೆ: ಶ್ಲಾಘನೆ

ಹುಳಿಯಾರು:ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಸೇವೆಯ ಮೂಲಕ ಬ್ಯಾಂಕಿಂಗ್ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾರಂಭ ಮಾಡಲಾಗಿರುವ ದಚ್ಚು ಮನಿ ಟ್ರಾನ್ಸ್ಫರ್ ಪಾಯಿಂಟ್ ಇನ್ನಷ್ಟು ಸೇವೆಯನ್ನು ಒದಗಿಸುವ ಮೂಲಕ ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾದ ಕನಸನ್ನು ನನಸು ಮಾಡಲಿ ಎಂದು ಹುಳಿಯಾರು ಬೆಸ್ಕಾಂ ಅಧಿಕಾರಿ ಉಮೇಶ್ ನಾಯ್ಕ್ ಆಶಿಸಿದರು.

ಬ್ಯಾಂಕುಗಳಲ್ಲಿ ಸಣ್ಣ ಪ್ರಮಾಣದ ಹಣ ಠೇವಣಿ ಮಾಡಲು ಅಥವಾ ಹಣವನ್ನು ಹಿಂಪಡೆಯಲು ಮಾಡಲು ದೂರದ ಹುಳಿಯಾರಿಗೆ ಹೋಗಬೇಕಿತ್ತು. ದಿನವಿಡಿ ಬ್ಯಾಂಕಿನಲ್ಲಿ ಸರತಿಸಾಲಿನಲ್ಲಿ ನಿಂತು ಜನ ಸಾಕಷ್ಟು ಸಮಸ್ಯೆ ಪಡುವಂತಾಗಿತ್ತು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ನಿಮ್ಮ ಊರಿನಲ್ಲಿಯೇ ಮನಿ ಟ್ರಾನ್ಸ್ಫರ್ ಪಾಯಿಂಟ್ ಪ್ರಾರಂಭವಾಗಿರುವುದರಿಂದ ನೀವು ಹಣ ಜಮಾ ಮಾಡಲು, ಹಣ ಹಿಂಪಡೆಯಲು, ಬೇರೆಯವರಿಗೆ ವರ್ಗಾವಣೆ ಮಾಡಲು ಬ್ಯಾಂಕಿನವರೆಗೂ ಹೋಗುವ ಅವಶ್ಯಕತೆ ಇಲ್ಲ. ಇಲ್ಲಿಯೇ ನಿಮ್ಮ ಬ್ಯಾಂಕಿನ ಉಳಿತಾಯ ಖಾತೆಯಿಂದ ಹಣ ಪಾವತಿ. ಹಣ ವರ್ಗಾವಣೆ ಎಲ್ಲವನ್ನು ಮಾಡಬಹುದು ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos