ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಂದು ಇಳಿಕೆ

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಂದು ಇಳಿಕೆ

ದೆಹಲಿ: ಜ. 5ರ ನಂತರ ಮಂಗಳವಾರ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಬುಧವಾರ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಗುರುವಾರ ವಾಹನ ಸವಾರರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಂದು ಇಳಿಕೆ ಕಂಡು ಬಂದಿದೆ.

ಪೆಟ್ರೋಲ್ ಬೆಲೆ 10 ಪೈಸೆ ಹಾಗೂ ಡಿಸೇಲ್ ಬೆಲೆ 9 ಪೈಸೆ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 71 ರೂಪಾಯಿ 9 ಪೈಸೆಯಾಗಿದೆ. ಡಿಸೇಲ್ ಬೆಲೆ ಲೀಟರ್ ಗೆ 65 ರೂಪಾಯಿ 81 ಪೈಸೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 10 ಪೈಸೆ ಇಳಿಕೆ ಕಂಡು ಲೀಟರ್ ಗೆ 73 ರೂಪಾಯಿ 43 ಪೈಸೆಯಾಗಿದೆ. ಡಿಸೇಲ್ ಬೆಲೆ 8 ಪೈಸೆ ಇಳಿಕೆ ಕಂಡು ಲೀಟರ್ ಗೆ 67 ರೂಪಾಯಿ 98 ಪೈಸೆಯಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಾದ ಬದಲಾವಣೆ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆಗೆ ಕಾರಣವಾಗಿದೆ.ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಗುರುವಾರ ಲೀಟರ್ ಗೆ 76 ರೂಪಾಯಿ 72 ಪೈಸೆಯಿದ್ದು, ಡಿಸೇಲ್ ಬೆಲೆ ಲೀಟರ್ ಗೆ 68 ರೂಪಾಯಿ 91 ಪೈಸೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos