ಮತ್ತೆ ಏರಿಕೆ ಕಂಡ ಡಿಸೇಲ್ ಬೆಲೆ

ಮತ್ತೆ ಏರಿಕೆ ಕಂಡ ಡಿಸೇಲ್ ಬೆಲೆ

ನವದೆಹಲಿ: ಡಿಸೇಲ್ ಬೆಲೆ ಶುಕ್ರವಾರ ಮತ್ತೆ ಏರಿಕೆ ಕಂಡಿದೆ. ಶುಕ್ರವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡಿಸೇಲ್ ಬೆಲೆ 10 ಪೈಸೆ ಹೆಚ್ಚಾಗಿದೆ.

ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ಪೆಟ್ರೋಲ್ ಲೀಟರ್ ಗೆ 71 ರೂಪಾಯಿ 21 ಪೈಸೆಗೆ ಮಾರಾಟವಾಗ್ತಿದೆ. ಡಿಸೇಲ್ ಬೆಲೆ 66 ರೂಪಾಯಿಯಾಗಿದೆ.

ಬೆಂಗಳೂರಿನಲ್ಲೂ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಡಿಸೇಲ್ ಬೆಲೆ 10 ಪೈಸೆ ಹೆಚ್ಚಳ ಕಂಡಿದ್ದು, ಲೀಟರ್ ಗೆ 68 ರೂಪಾಯಿ 17 ಪೈಸೆಯಾಗಿದೆ. ಪೆಟ್ರೋಲ್ ಬೆಲೆ ಲೀಟರ್ ಗೆ 73 ರೂಪಾಯಿ 62 ಪೈಸೆಗೆ ಮಾರಾಟವಾಗ್ತಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಹಾಗಾಗಿ ಮತ್ತೆ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ.

ಫ್ರೆಶ್ ನ್ಯೂಸ್

Latest Posts

Featured Videos