ರಾಕ್ಷಸ ಮಗು ತಾಯಿ, ನರ್ಸ್​​ನನ್ನು ಕೊಂದಿತ್ತಾ?

ಅಸ್ಸಾಂ, ನ. 27 : ರಾಕ್ಷಸ ಮಗುವೊಂದು ಜನಿಸಿದೆ. 11 ತಿಂಗಳಿಗೆ ಜನಿಸಿದ ಈ ಮಗು ರಾಕ್ಷಸನಂತಿದ್ದು, ಇದು ತಾಯಿ ಕರಳನ್ನು ತಿಂದು ಆಕೆಯನ್ನು ಸಾಯಿಸಿದೆ. ಅಷ್ಟೇ ಅಲ್ಲ, ಮಗುವನ್ನು ಮುಟ್ಟಿದ ನರ್ಸ್ ಕೂಡ ಮೃತಪಟ್ಟಿದ್ದಳು, ಎನ್ನುವ ಸುದ್ದಿ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ಆದರೆ, ಇದರ ಅಸಲಿಯತ್ತು ಮಾತ್ರ ಬೆರೇಯೆ ಇದೆ! ‘ರಕ್ಕಸ ಮಾದರಿಯ ಮಗು ಜನನ’ ಎನ್ನುವ ಶೀರ್ಷಿಕೆಯೊಂದಿಗೆ ಇತ್ತೀಚೆಗೆ ಪತ್ರಿಕೆಯೊಂದು ವರದಿ ಮಾಡಿತ್ತು. ಈ ಸುದ್ದಿಯ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ, ವೈರಲ್ ಆದ ವಿಡಿಯೋದಲ್ಲಿ ಮಗು ನೆಲದ ಮೇಲೆ ಮಲಗಿ ಅಳುತ್ತಿರುವ ಹಾಗೂ ಅದರ ಮೇಲೆ ನೊಣ ಹಾರುತ್ತಿರುವ ದೃಶ್ಯ ಕಂಡು ಬಂದಿತ್ತು. ಪೇಪರ್ನಲ್ಲಿ ಪ್ರಕಟವಾದ ಸುದ್ದಿಯಲ್ಲಿ ಈ ಮಗು ತಾಯಿಯನ್ನೇ ಕೊಂದಿದೆ. ನಂತರ ಮಗುವಿಗೆ ಇಂಜೆಕ್ಷನ್ ನೀಡಿ ಸಾಯಿಸಲಾಗಿತ್ತು ಎನ್ನಲಾಗಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos