ಧೋನಿ ನ್ಯೂ ಲುಕ್..! ಸೋಷಿಯಲ್ ಮೀಡಿಯಾದಲ್ಲಿ ಧೂಳೇಬ್ಬಿಸಿದೆ

ಧೋನಿ ನ್ಯೂ ಲುಕ್..! ಸೋಷಿಯಲ್ ಮೀಡಿಯಾದಲ್ಲಿ ಧೂಳೇಬ್ಬಿಸಿದೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಎನ್ನುವುದು ಒಂದು ದೊಡ್ಡ ಆಟವಾಗಿದೆ. ಅದರಲ್ಲಿಯೂ ಧೋನಿ ಎಂದರೆ ನಮಗೆ ಅತಿ ಹೆಚ್ಚು ಇಷ್ಟವಾಗುತ್ತಾರೆ. ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ, ಕಳೆದ ಒಂದೂವರೆ ದಶಕಗಳ ಕ್ರಿಕೆಟ್ ಬದುಕಿನಲ್ಲಿ ಹಲವಾರು ಬಾರಿ ತಮ್ಮ ಹೇರ್‌ಸ್ಟೈಲ್ ಮೂಲಕವೇ ಗಮನ ಸೆಳೆದಿದ್ದಾರೆ. ಈ ಪೈಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಹಿಡಿದು 2007ರ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವವರೆಗೆ ಇದ್ದ ಉದ್ದದ ಹೇರ್‌ಸ್ಟೈಲ್ ಹೆಚ್ಚು ಗಮನ ಸೆಳೆದಿತ್ತು. ಒಮ್ಮೆ ಭಾರತ ತಂಡವು ಪಾಕಿಸ್ತಾನ ಪ್ರವಾಸ ಮಾಡಿದ್ದಾಗ ಪಾಕಿಸ್ತಾನದ ಪ್ರಧಾನಿಯಾಗಿದ್ದ ಪರ್ವೇಜ್‌ ಮುಷರಫ್ ಕೂಡಾ ಧೋನಿ ಹೇರ್‌ಸ್ಟೈಲ್ ಗುಣಗಾನ ಮಾಡಿದ್ದನ್ನು ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವಿಲ್ಲ. ಇದೀಗ ಧೋನಿ ಕ್ರಿಕೆಟ್ ವೃತ್ತಿಬದುಕಿನ ಸಂಧ್ಯಾಕಾಲದಲ್ಲಿದ್ದು, ಮತ್ತೊಮ್ಮೆ ವಿಂಟೇಜ್ ಧೋನಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಬಂದೊದಗಿದೆ.
ಪ್ರಖ್ಯಾತ ಕೇಶ ವಿನ್ಯಾಸಕಾರರಾಗಿರುವ ಅಲಿಮ್ ಹಕೀಂ, ಇದೀಗ ಧೋನಿಗೆ ಮತ್ತೊಮ್ಮೆ ಹೊಸ ಹೇರ್‌ಸ್ಟೈಲ್ ಮಾಡಿದ್ದು, ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಧೂಳೇಬ್ಬಿಸಿದ್ದು, ಯಾರಿದು ಹೀರೋ ಎಂದು ಅಭಿಮಾನಿಗಳು ಉದ್ಘಾರ ತೆಗೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos