4ನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್ ಮಹತ್ವ: ಗಂಗೂಲಿ

  • In Sports
  • January 19, 2019
  • 198 Views
4ನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್ ಮಹತ್ವ: ಗಂಗೂಲಿ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ನಡೆದ ಕೊನೆಯ​ ಏಕದಿನ
ಪಂದ್ಯದಲ್ಲಿ ಅಜೇಯ 87 ರನ್​​ಗಳಿಕೆ ಮಾಡುವ ಮೂಲಕ ಕಾಂಗರೂ ನೆಲದಲ್ಲಿ ಬ್ಲೂ ಬಾಯ್ಸ್​​ ಐತಿಹಾಸಿಕ
ಗೆಲುವು ದಾಖಲು ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಮಹೇಂದ್ರ ಸಿಂಗ್​ ಧೋನಿ ಕುರಿತು
ಇದೀಗ ಪ್ರಶಂಸೆ ವ್ಯಕ್ತವಾಗುತ್ತಿದೆ

ಧೋನಿ ಬ್ಯಾಟಿಂಗ್​ ಕ್ರಮಾಂಕದ ಬಗ್ಗೆ ಮಾತನಾಡಿರುವ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ, ನಾಲ್ಕನೇ ಕ್ರಮಾಂಕದಲ್ಲಿ ವಿಕೆಟ್​ ಕೀಪರ್​​ ಬ್ಯಾಟ್ಸ್​​ಮನ್​ ಧೋನಿ ಬ್ಯಾಟಿಂಗ್​ ಮಾಡುವುದು ತಂಡದ ಹಿತದೃಷ್ಠಿಯಿಂದ ಒಳ್ಳೆಯದು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಲು ಕಣಕ್ಕಿಳಿಯುವುದರಿಂದ ಅವರು ನೆಲೆಯೂರಿ ಚೆನ್ನಾಗಿ ರನ್​ ಕಲೆಹಾಕಲು ಸಮಯವಕಾಶವಿರುತ್ತದೆ. ಮುಂದಿನ ಪಂದ್ಯಗಳಲ್ಲಿ ಅವರಿಗೆ ಇದೇ ಅವಕಾಶ ನೀಡಬೇಕು. ನಂಬರ್​ 3ನೇ ಸ್ಥಾನದಲ್ಲಿ ಕೊಹ್ಲಿ, ನಂಬರ್​ 5ನೇ ಸ್ಥಾನದಲ್ಲಿ ಕೇದಾರ್​ ಹಾಗೂ ಉಳಿದಂತೆ ಕಾರ್ತಿಕ್​ ಬ್ಯಾಟ್​ ಬೀಸಲಿ ಎಂದಿದ್ದಾರೆ.

ಈ ಹಿಂದಿನ ಟೂರ್ನಿಗಳಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲು ಧೋನಿ ಮೈದಾನಕ್ಕಿಳಿಯುತ್ತಿದ್ದರು. ಇದೀಗ ಅವರು ಬಡ್ತಿ ಪಡೆದು 4ನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಅದರ ಫಲವಾಗಿ ಆಸ್ಟ್ರೇಲಿಯಾ ವಿರುದ್ಧದ 2ನೇ ಹಾಗೂ 3ನೇ ಏಕದಿನ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಲು ಧೋನಿ ಸೂಕ್ತ ಎಂದು ತಿಳಿಸಿದ್ದಾರೆ. 

ಫ್ರೆಶ್ ನ್ಯೂಸ್

Latest Posts

Featured Videos