ದರ್ಗಾದಲ್ಲಿ ಆನೆಗಳಿಗೆ ಪೂಜೆ

ದರ್ಗಾದಲ್ಲಿ ಆನೆಗಳಿಗೆ ಪೂಜೆ

ಮೈಸೂರು , ಅ. 8 : ನಾಡಹಬ್ಬ ದಸರಾ ಕರುನಾಡಿಗರ ಹಬ್ಬ. ಜಾತಿ, ಧರ್ಮ ಮೀರಿ ಜನಸಮೂಹ ಮೈಸೂರು ದಸರಾದಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ದಸರಾದಲ್ಲೊಂದು ಭಾವೈಕ್ಯತೆಯ ಸಂದೇಶವಿದೆ . ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳಿಗೆ ಯಾವುದೇ ಅಡ್ಡಿ ಆತಂಕ ಎದುರಾಗದಿರಲಿ ಎಂಬ ಕಾರಣಕ್ಕಾಗಿ ಮೈಸೂರಿನ ದರ್ಗಾವೊಂದರಲ್ಲಿ ಪೂಜೆ ಸಲ್ಲಿಸುವ ಪರಂಪರೆ ಚಾಲ್ತಿಯಲ್ಲಿದೆ. ಮೈಸೂರಿನ ದೇವರಾಜ ಮೊಹಲ್ಲಾದ ಕೃಷ್ಣವಿಲಾಸ ರಸ್ತೆಯಲ್ಲಿ ಹಜರತ್ ಇಮಾಮ್ ಶಾ ದರ್ಗಾವಿದೆ. ನಾಡಹಬ್ಬ ದಸರಾಗೂ ಈ ದರ್ಗಾಗೂ ಅವಿನಾಭಾವ ಸಂಬಂಧವಿದೆ. ಬಹು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯದಂತೆ ಜಂಬೂಸವಾರಿಗೂ ಮುನ್ನ ಈ ದರ್ಗಾದಲ್ಲಿ ಆನೆಗಳಿಗೆ ವಿಶೇಷ ಪೂಜೆ ನಡೆಯುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos