ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆ ಒತ್ತುವರಿ

ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆ ಒತ್ತುವರಿ

ಮಹದೇವಪುರ : ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಕೆರೆ ಜಾಗ ತೆರವು ಮಾಡಬೇಕೆಂದು ಜೆ.ಡಿ.ಎಸ್ ಮುಖಂಡ ಹಾಗೂ ನಲ್ಲೂರಹಳ್ಳಿ ವಾಸಿ ಎನ್. ಗೋವರ್ಧನ್ ಒತ್ತಾಯಿಸಿದರು.

ನಲ್ಲೂರಹಳ್ಳಿ ಹಾಗು ಪಟ್ಟಂದೂರ ಅಗ್ರಹಾರಕ್ಕೆ ಸೇರಿದ ಕೆರೆ ಜಾಗವನ್ನು ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಸಹಯೋಗದಿಂದ ಸುಮಾರು 8 ಕೋಟಿ ರೂ. ಗಳ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು ಒತ್ತುವರಿಯಾಗಿರುವ ಕೆರೆ ಜಾಗವನ್ನು ತೆರವುಗೊಳಿಸಿ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಎನ್. ಗೋವರ್ಧನ್, ಸಿ.ಎಂ.ಚಂದ್ರು, ಡಿ.ಕೆ ಚಂದ್ರ ಶೇಖರ್ ಸೇರಿದಂತೆ ಹಲವು ಗ್ರಾಮಸ್ಥರ ತಂಡ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಎಲ್ಲರೂ ಪಕ್ಷ ಬೇದ ಮರೆತು ಅಭಿವೃದ್ಧಿ ವಿಚಾರದಲ್ಲಿ ಕೈಜೋಡಿಸಿ ಒಗ್ಗಟ್ಟು ಪ್ರದರ್ಶನಕ್ಕೆ ಮನವಿ ಮಾಡಿದರು.

ಕೆರೆಯ ಹೆಚ್ಚು ಪಾಲು ಒತ್ತುವರಿಯಾಗಿದ್ದು ಆ ಜಾಗದಲ್ಲಿ ತಾತ್ಕಾಲಿಕ ಗುಡಿಸಲು ನಿರ್ಮಿಸಿ ಲಕ್ಷಾಂತರ ಅಕ್ರಮ ಹಣ ಒತ್ತುವರಿ ಮಾಡಿರುವುವರ ಜೊಬು ಸೇರುತ್ತಿದೆ ಎಂದರು.

ನಲ್ಲೂರಹಳ್ಳಿ ಕಾಂಗ್ರೆಸ್ ಮುಖಂಡರಾದ ಸಿ.ಎಂ.ಚಂದ್ರು ಪ್ರತಿಕ್ರಿಯಿಸಿ ಕೆರೆ ಅಭಿವೃದ್ಧಿಗೆ 8 ಕೋಟಿ ವ್ಯಚ್ಚ ಮಾಡಲಿದ್ದು ಅದರಲ್ಲಿ 4 ಕೋಟಿ ರೂ.ಗಳು ಸರ್ಕಾರದ ಅನುದಾನ ಉಳಿಕೆ 4 ಕೋಟಿ ರೂ ಖಾಸಗಿ ಕಂಪನಿಗಳು ಬರಿಸಲಿದ್ದಾರೆ. ಕೆರೆಯ ಸುತ್ತಾ 10 ರಿಂದ 12 ಅಡಿ ವಾಕ್ ಟ್ರಾಕ್ ನಿರ್ಮಾಣ ಮಾಡಿ ಹಿರಿಯ ನಾಗರೀಕರು ವಾಕಿಂಗ್ ಮಾಡಲು ಮುಕ್ತಗೊಳಿಸಲು ಯೋಜನೆ ಮಾಡಲಾಗಿದೆ ಎಂದರು.

ಕೆರೆ ಅಭಿವೃದ್ಧಿ ವಿಚಾರದಲ್ಲಿ ಗ್ರಾಮದ ಎಲ್ಲಾ ಮುಖಂಡರು ಪಕ್ಷ ಬೇದ ಮರೆತು ಕೈಜೋಡಿಸಿ ಎಂದು ಮನವಿ ಮಾಡಿದರು. ಇದೆ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಡಿ.ಕೆ. ಚಂದ್ರಶೇಖರರೆಡ್ಡಿ ಪ್ರತಿಕ್ರಿಯಿಸಿ ಕೆರೆ ಅಭಿವೃದ್ಧಿ ಈಗಾಗಲೆ ಚಾಲನೆಯಾಗಿದ್ದು ಒತ್ತುವರಿಯಾಗಿರುವ ಕೆರೆ ಜಾಗವನ್ನು ತೆರವುಗೊಳಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos