“ದೇವೇಗೌಡರಿಗೆ ಮೆಚ್ಯುರಿಟಿ ಇಲ್ಲ” ಬಿ. ಎಸ್. ಬಸವರಾಜು!

“ದೇವೇಗೌಡರಿಗೆ ಮೆಚ್ಯುರಿಟಿ ಇಲ್ಲ” ಬಿ. ಎಸ್. ಬಸವರಾಜು!

ತುಮಕೂರು, ಏ. 22, ನ್ಯೂಸ್ ಎಕ್ಸ್ ಪ್ರೆಸ್: ಚುನಾವಣೆ ಈಗಾಗಲೇ ಮೊದಲ ಹಂತದ ಮತದಾನ ಮುಗಿದಿದ್ದು, ಎರಡನೇ ಹಂತದ ಮತದಾನ ನಾಳೆ ನಡೆಯಬೇಕಿದೆ. ಈ ವೇಳೆ ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು, ದೇವೇಗೌಡರಿಗೆ ಪ್ರಧಾನಿಯಾಗಿಯೂ ಮೆಚ್ಯುರಿಟಿ ಬಂದಂಗೆ ಕಾಣ್ತಿಲ್ಲ. ಪ್ರಜಾ ಪ್ರಭುತ್ವದಲ್ಲಿ ನಾನು ಬಿಜೆಪಿ ಅಭ್ಯರ್ಥಿಯಾಗಿ ನಿಂತಿದ್ದೇನೆ ಹೊರತು ದೇವೇಗೌಡರ ಎದುರಾಳಿಯಾಗಿ ನಿಂತಿಲ್ಲ. ದೇವೇಗೌಡ್ರು ಕೂಡ ಒಂದು ಪಕ್ಷದ ಅಭ್ಯರ್ಥಿ ಅಲ್ಲವೇ ಲಡಾಯಿ ಪಕ್ಷ ಮತ್ತೆ ಪಕ್ಷದ ನಡುವೆ ಆಗ್ತಾ ಇದೆ. ದೇವೇಗೌಡ್ರಿಗೂ ನಮಗೂ ಅಲ್ಲಾ, ಅವರ ಮನಸ್ಸಿನಲ್ಲಿ‌ ಬಹುಶಃ ಅದೇ ಇರಬೇಕು. ಮಾಟ ಮಂತ್ರ ಮೂಡನಂಬಿಕೆ‌ ಅದೆಲ್ಲಾ ಹೇಳತ್ತಾರಲ್ಲಾ ಅದೆಲ್ಲಾ ಮಾಡೋರೆ ಹೇಳೋರು,  ಈ ಲೆಕ್ಕಾಚಾರದಲ್ಲಿ ಹೇಳೋದಾದ್ರೆ ದೇವೇಗೌಡ್ರಿಗೆ ಪ್ರಧಾನಿಯಾದ್ರೂ ಇನ್ನೂ ಬುದ್ದಿ ಬಂದಿಲ್ಲ. ನನ್ನ ಎದರಾಕ್ಕೊಂಡವ್ನು ಸಾಯ್ತಾನೆ ಅಂತಾರೆ ಹುಟ್ಟಿದ್ಮೆಲೆ ಸಾಯ್ಲೇ ಬೇಕು. ನಾನು ಸಾಯ್ತಿನಿ‌ ಅವರು ಸಾಯ್ತಾರೆ, ಎಲ್ರೂ ಒಂದಿನ ಸಾಯ್ಲೇ ಬೇಕು ಅದು ಪ್ರಕೃತಿ ನಿಯಮ. ಮದುಗಿರಿಯಲ್ಲಿ ಕೆ ಎನ್ ರಾಜಣ್ಣ ಬಿಜೆಪಿಗೆ ಬೆಂಬಲ‌ ವಿಚಾರಕ್ಕೆ  ಬಂದರೆ ಜಿಲ್ಲೆಯಲ್ಲಿ ಜೆಡಿಎಸ್ ಕಾಂಗ್ರೇಸ್ ನಲ್ಲಿ ಹೊಂದಾಣಿಕೆ‌ ಇಲ್ಲ. ಯಾರು ಯಾರಿಗೆ ಬೆಂಬಲ ನೀಡಿದ್ದಾರೋ ಗೊತ್ತಿಲ್ಲ. ಕಾಂಗ್ರೇಸ್ ನ ಮುಖಂಡರಿಗೂ ಬೆಂಬಲ‌ ನೀಡುವಂತೆ ಕೇಳಿಕೊಂಡಿದ್ದೆ. ದೇವೇಗೌಡ್ರ ಸೊಸೆಯಂದಿರು ಮೊಮ್ಮಕ್ಳಲ್ಲೆ ರಾಜಕೀಯಕ್ಕೆ ಬರ್ತಿದ್ದಾರೆ. ಜಿಲ್ಲೆಯ ಕ್ಷೇತ್ರಗಳನ್ನ ಬಿಟ್ಟು ಕೊಡಬೇಕಾಗುತ್ತೆ ನಮ್ಮನ್ನೆಲ್ಲಾ ವಾಷ್ ಔಟ್ ಮಾಡ್ತಾರೆ ಅಂತಾ ಜೆಡಿಎಸ್ ನಲ್ಲಿ ಅಸಮಾಧಾನವಿದೆ. ಎಂ ಎಲ್ ಸಿ‌ ಕಾಂತರಾಜ್ ಎಲ್ಲಿಯವನು..? ಇಲ್ಲಿಗೆ ತಂದು ಗೆಲ್ಲಿಸಿಲ್ವಾ, ಇದು ಹಾಗೆ ಎಂದು ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಮೈತ್ರಿ ಸರ್ಕಾರದ ವಿರುದ್ಧ ವಾಕ್​ ಸಮರ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos