ಖತರ್ನಾಕ್ ಕಳ್ಳರ ಬಂಧನ

ಖತರ್ನಾಕ್ ಕಳ್ಳರ ಬಂಧನ

ದೇವನಹಳ್ಳಿ, ಸೆ. 28: ಸಿಕ್ಕ ಸಿಕ್ಕ ಕಡೆಯಲ್ಲ ದೇವಾಲಯಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ 2 ಖತರ್ನಾಕ್ ಕಳ್ಳರನ್ನ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ನಿವಾಸಿ ಮಣಿ (32) ಹಾಗೂ ಆಂದ್ರದ ಹಿಂದೂಪುರದ ನಿವಾಸಿ ಸಂಗೀತಕುಮಾರ (23) ಬಂದಿತ ಖತರ್ನಾಕ್ ಕಳ್ಳರು. ಈ ಇಬ್ಬರು ಆರೋಪಿಗಳು ಶಿಡ್ಲಘಟ್ಟ, ಸೂಲಿಬೆಲೆ, ಚಿಕ್ಕಬಳ್ಳಾಪುರ ಹೊಸಹಳ್ಳಿ, ಗೌರಿಬಿದನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಬೈಕ್‌ ಗಳು ಹಾಗೂ ದೇವಾಲಯಗಳಲ್ಲಿ ಆಭರಣಗಳನ್ನ ಕಳ್ಳತನ ಮಾಡಿ ಎಸ್ಕೆಪ್ ಹಾಗಿದ್ದರು. ಗಸ್ತಿನಲ್ಲಿದ್ದ ದೇವನಹಳ್ಳಿ ಪೊಲೀಸರು ನಂದಿಬೆಟ್ಟದ ರಸ್ತೆಯ ನಿಲೇರಿ ಬಳಿ ಅನುಮಾನಸ್ಪಾದವಾಗಿ ನಿಂತಿದ್ದ ಇಬ್ಬರನ್ನ ವಶಕ್ಕೆ ಪಡೆದು ಪ್ರಶ್ನಿಸಿದಾಗ ಇವರಿಬ್ಬರು ಕೃತ್ಯ ಬಯಲಿಗೆ ಬಂದಿದೆ.

ಬಂಧಿತರಿಂದ 2 ಬೈಕ್, ದೇವರ ಬೆಳ್ಳಿ ಮುಖವಾಡ ಸೇರಿದಂತೆ 8 ಕೆಜಿ ಬೆಳ್ಳಿ ಆಭರಣಗಳು, 54 ಹಿತ್ತಾಳೆ ಗಂಟೆಗಳು, 40 ಕೆಜಿ ಪಂಚಲೋಹದ ಶಿವನ ಮುಖವಾಡ 20 ಗ್ರಾಂನ 21 ತಾಳಿ ಬೊಟ್ಟುಗಳು ಸೇರಿದಂತೆ 7 ಲಕ್ಷ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಲಾಗಿದೆ. ಇನ್ನೂ ಆರೋಪಿಗಳನ್ನ ಪೊಲೀಸರು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದು, ದೇವನಹಳ್ಳಿ ಇನ್ಟ್ಪೆಕ್ಟರ್ ಸಿದ್ದರಾಜು, ಸಬ್‌ ಇನ್ಸ್ಪೆಕ್ಟರ್ ನಾಗರಾಜ್ ಹಾಗೂ ಸಿಬ್ಬಂದಿಗಳಾದ ಮಂಜುನಾಥ್, ಶಶಿಕುಮಾರ್‌ ಪ್ರಕರಣ ಭೇದಿಸಿದ ರೀತಿಗೆ ಸಾರ್ವಜನೀಕರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos