ಹೆದ್ದಾರಿ ದರೊಡೆಕೋರರ ಬಂಧನ

ಹೆದ್ದಾರಿ ದರೊಡೆಕೋರರ ಬಂಧನ

ಕುಣಿಗಲ್: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಸಂಚರಿಸುವ ಒಂಟಿ ವಾಹನಗಳನ್ನು ಗುರಿಯಾಗಿಸಿಕೊಂಡು ಡಕಾಯಿತಿ ಮಾಡುತ್ತಿದ್ದ ೩ ಜನ ಖದೀಮರನ್ನು ಬಂಧಿಸಿ ಅವರಿಂದ ೪೦ ಗ್ರಾಂ ಚಿನ್ನದ ಸರ ಹಾಗೂ ೯ ಸಾವಿರ ನಗದನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ರೇವಂತ್, ಮುರಳಿಕೃಷ್ಣ, ಹೇಮಂತ್ ಬಂಧಿತ ಆರೋಪಿಗಳು ಡಿಪ್ಲೊಮೋ ಪಧವೀದರರಾಗಿದ್ದು ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ತಮ್ಮ ಮೋಜು ಮಸ್ತಿಗಾಗಿ ಕಳ್ಳತನ ಮಾಡಿದಾರೆ ಎಂದು ತಿಳಿದು ಬಂದಿದೆ.
ತಾವು ಕಲಿತ ಡಿಪ್ಲೊಮೊ ವಿದ್ಯೆಯನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ಬಳಸುವ ಸಲುವಾಗಿ ದರೋಡೆ ಮಾಡಿದ ನಂತರ ಅವರು ಪೋನ್ ಬಳಸದೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದರು ಎಂಬುದು ವಿಶೇಷ .
ಕಳ್ಳರ ಜಾಡು
ಕಳ್ಳರನ್ನು ಬಂಧಿಸಬೇಕೆಂದು ತೀರ್ಮಾನಿಸಿದ್ದ ಪೊಲೀಸರು ಕೆಲವು ಅನುಮಾನವಿದ್ದ ಸ್ಥಳಗಳಲ್ಲಿ ನಿಗೂಢ ಬಾತ್ಮೀದಾರರನ್ನು ನೇಮಿಸಿ ೬ ತಿಂಗಳಿಂದ ನಿರಂತರ ಪ್ರಯತ್ನದಲ್ಲಿದ್ದರು .
ಡಕಾಯಿತರ ಗುಂಪು ಕುಡಿದ ಮತ್ತಿನಲ್ಲಿ ಕಳ್ಳತನ ಬಗ್ಗೆ ಬಾಯಿಬಿಟ್ಟ ಸಂಬಂಧ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ
ಮಾರ್ಚ್ ೩ರ ಮಂಗಳವಾರ ಧರ್ಮಸ್ಥಳ ಗ್ರಾಮಾಬಿವೃದ್ದಿ ಸಂಸ್ಥೆಯ ಎಡೆಯೂರು ಹೋಬಳಿಯ ಸಿಂಗೋನಹಳ್ಳಿ ಅಗ್ರಹಾರದ ಬಳಿ ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಹೋಗುವಾಗ ಒಂಟಿ ಮಹಿಳೆಯನ್ನು ಗುರಿಯಾಗಿಸಿ ಅಲ್ಲಿಗೆ ದ್ವಿಚಕ್ರ ವಾಹನದಲ್ಲಿ ಬಂದ ಖದೀಮರು ಆಕೆಗೆ ಹಲ್ಲೆ ಮಾಡಿ ೪೦ ಗ್ರಾಂ ಚಿನ್ನದ ಸರ ಸೇರಿದಂತೆ ನಗದನ್ನು ಅಪಹರಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos