ಜೊಲ್ಲಿನಿಂದ ಕ್ಯಾನ್ಸರ್ ಪತ್ತೆ

ಜೊಲ್ಲಿನಿಂದ ಕ್ಯಾನ್ಸರ್ ಪತ್ತೆ

ಬೆಂಗಳೂರು,ನ.20 : ಕೆಲವು ಹನಿಗಳಷ್ಟು ಜೊಲ್ಲು ಬಳಸಿ ಕ್ಯಾನ್ಸರ್ ಪತ್ತೆ ಮಾಡಬಹುದಾಗಿದೆ. ಮೆಡಿಕಲ್ ಎಂಜಿನಿಯರಿಂಗ್ ಮತ್ತು ಡಿಜಿಟಲ್ ತಂತ್ರಜ್ಞಾನದಿಂದ ಮತ್ತಷ್ಟು  ದೇಹದ ಹಲವು ಅಂಗಾಂಗಗಳ ದ್ರವವನ್ನು ಬಳಸಿ ಆಯಾ ಅಂಗಾಂಗಗಳು ಕ್ಯಾನ್ಸರ್ ಪೀಡಿತವಾಗಲಿವೆಯೇ ಎಂಬುದನ್ನೂ ನಿಖರವಾಗಿ ಪತ್ತೆ ಮಾಡಬಹುದಾಗಿದೆ. ಕೆಲವು ರೀತಿಯ ಕ್ಯಾನ್ಸರ್ಗಳ ರೋಗ ಲಕ್ಷಣಗಳು ತಡವಾಗಿ ಕಾಣಿಸಿಕೊಳ್ಳುತ್ತವೆ. ಹೊಸ ವಿಧಾನದಿಂದಾಗಿ ವಂಶವಾಹಿ ಮೂಲಕ ಬರುವ ಕ್ಯಾನ್ಸರ್ ಅನ್ನು ಬೇಗನೆ ಪತ್ತೆ ಮಾಡಿ; ವ್ಯಕ್ತಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ಆರಂಭಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಸ್ಟ್ರಾಂಡ್ ಲೈಫ್ ಸೈನ್ಸಸ್ನ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ.ವಂಶಿ ವೀರಮಚೆನೇನಿ. ಬೆಂಗಳೂರು ತಾಂತ್ರಿಕ ಶೃಂಗಸಭೆಯಲ್ಲಿ ಅವರು ಈ ಕುರಿತು ಸ್ವಾರಸ್ಯಕರ ಮಾಹಿತಿ ಹಂಚಿಕೊಂಡರು. ಕೆಲವು ಬಗೆಯ ಕ್ಯಾನ್ಸರ್ಗಳು ವಂಶವಾಹಿಯಾಗಿ ಬಂದರೆ, ಇನ್ನು ಕೆಲವು ಬಗೆಯ ಕ್ಯಾನ್ಸರ್ಗಳು ಬೇರೆ ಕಾರಣಗಳಿಂದ ಬರುತ್ತವೆ. ವಂಶವಾಹಿಯಿಂದ ಬರುವ ಕ್ಯಾನ್ಸರ್ಗಳನ್ನು ಪತ್ತೆ ಮಾಡಿದರೆ, ಆ ಕುಟುಂಬದಲ್ಲಿ ಬೇರೆ ಸದಸ್ಯರಿಗೆ ಭವಿಷ್ಯದಲ್ಲಿ ಬಾಧಿಸುತ್ತದೆಯೇ ಎಂಬುದನ್ನು ಮೊದಲೇ ಕಂಡುಕೊಳ್ಳಬಹುದು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos