ದೋಸ್ತಿ ಸರ್ಕಾರದ ಪತನಕ್ಕೆ ಮೂಹೂರ್ತ ಫಿಕ್ಸ್

ದೋಸ್ತಿ ಸರ್ಕಾರದ ಪತನಕ್ಕೆ ಮೂಹೂರ್ತ ಫಿಕ್ಸ್

ಬೆಂಗಳೂರು, ಏ. 24, ನ್ಯೂಸ್ ಎಕ್ಸ್ ಪ್ರೆಸ್: ರಾಜ್ಯದಲ್ಲಿ ನೆನ್ನೆಯಷ್ಟೆ  2ನೇ ಹಂತದ ಮತದಾನ ಮುಗಿದಿದೆ. ಈಗಾಗಲೇ ಸಾಕಷ್ಟು ಅತೃಪ್ತ ಶಾಸಕರು ಪಕ್ಷ ಬಿಟ್ಟು ಪಕ್ಷಕ್ಕೆ ಪಕ್ಷಾಂತರಗೊಳ್ಳುತ್ತಿದ್ದಾರೆ. ಇದರ ಹಿನ್ನಲ್ಲೇಯಲ್ಲಿಯೇ  ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಪತನಕ್ಕೆ ಬಿಜೆಪಿ ನಾಯಕರು ಕಾರ್ಯಾಚರಣೆ ಶುರು ಮಾಡಿಕೊಂಡಿದ್ದಾರೆ.

ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ತಾವು ಸದ್ಯದಲ್ಲೇ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ನಡೆದಂತಹ  ಈ ದಿಢೀರ್ ರಾಜಕೀಯ ಬೆಳವಣಿಗೆ ಬಳಿಕ ಬಿಜೆಪಿ ಪಾಳಯದಲ್ಲಿ ಉತ್ಸಾಹ ಮೂಡಿರುವ ರೀತಿ ಕಾಣುತ್ತಿದೆ. ಮಾಧ್ಯಮಗಳ ಜೊತೆ ಮಾತನಾಡಿದ ಬಹುತೇಕ ನಾಯಕರು ದೋಸ್ತಿ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ವಿಶ್ವಾಸಪೂರ್ಣ ಮಾತುಗಳನ್ನ ಆಡಿದ್ದಾರೆ.

ಇದಕ್ಕಾಗಿ ಲೋಕಸಭಾ ಚುನಾವಣೆಯ ಫಲಿತಾಂಶದ ದಿನವಾದ ಮೇ 23 ನ್ನು ನಿಗದಿ ಮಾಡಲಾಗಿದೆ. ಫಲಿತಾಂಶ ಬಂದ ಕೂಡಲೆ ದೋಸ್ತಿ ಪತನಗೊಳ್ಳುತ್ತದೆ ಎಂಬ ಮಾತು ಬಿಜೆಪಿ ಪಕ್ಷದಲ್ಲ ಕೇಳಿ ಬರುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos