ಬೆಂಗಳೂರು: ವಿನ್ಯಾಸಕಾರರ ಆಭರಣ ಮಳಿಗೆ ಆರಂಭ

ಬೆಂಗಳೂರು: ವಿನ್ಯಾಸಕಾರರ ಆಭರಣ ಮಳಿಗೆ ಆರಂಭ

ಬೆಂಗಳೂರು: ಬೆಂಗಳೂರು: ಭಾರತದಲ್ಲಿ 1901ರಿಂದ ಅತ್ಯಂತ ಹಳೆಯ ಬುಲಿಯನ್ ಮಾರಾಟಗಾರರಾದ ಕ್ಯಾಪ್ಸ್ ಗೋಲ್ಡನ್ ಘಟಕವಾದ ಕಲಶ ಫೈನ್ ಜುವೆಲರಿಸ್‍ನಿಂದ ತನ್ನ ಪ್ರಥಮ ವಿನ್ಯಾಸಕಾರರ ಆಭರಣ ಮಳಿಗೆ ಬೆಂಗಳೂರಿನಲ್ಲಿ ಆರಂಭವಾಗಿದೆ.
ಈ ಸಂದರ್ಭದಲ್ಲಿ ನಟಿ ಮತ್ತು ಬಿಗ್‌ಬಾಸ್-10 ರನ್ನರ್ ಅಪ್ ಲೋಪಾಮುದ್ರಾ ರೌತ್, ಮಿಸ್ ಇಂಡಿಯಾ ಸುಶ್ರುತಿ ಕೃಷ್ಣ ಅವರೊಂದಿಗೆ ಅಗ್ರ ರೂಪದರ್ಶಿಗಳಿಂದ ‘ಗ್ರಾಂಡ್ ಹೆರಿಟೇಜ್ ನಿಜಾಮಿ ಸಂಗ್ರಹ’ ಪ್ರದರ್ಶನ ಮಾಡಿದರು.
ನಿಮ್ಮದೇ ಆದ ವಿನ್ಯಾಸ ಕಲ್ಪನೆ ರೂಪಿಸುವುದು, ಪ್ರತ್ಯೆಕ ವಿನ್ಯಾಸಕಾರ ಲಾಂಜ್‌ಗಳು, ಗೃಹ ಸೇವೆ, ವಿಡಿಯೋ ಕಾಲ್ ಶಾಪಿಂಗ್ ಮುಂತಾದ ವಿಶೇಷ ಸೇವೆಗಳ ವೈಶಿಷ್ಟತೆಗಳನ್ನು ಮಳಿಗೆ ಸಾದರಪಡಿಸುತ್ತಿದೆ.

ಬೆಂಗಳೂರಿನ ಜಯನಗರ 3ನೇ ಬ್ಲಾಕ್‌ನಲ್ಲಿ ತನ್ನ ಮೊದಲ ಮಳಿಗೆ ಆರಂಭಿಸುವುದನ್ನು ಕಳಶ ಫೈನ್ ಜುವೆಲರ್ಸ್  ಪ್ರಕಟಿಸಿದೆ.
ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ತಮ್ಮ ಪ್ರಸ್ತುತ ಇರುವ ಮಳಿಗೆಗಳ ಯಶಸ್ಸಿನ ನಂತರ, ಈ ನೂತನ ಮಳಿಗೆ ಚಿನ್ನ, ವಜ್ರ, ಜಡಾ ಮತ್ತು ಬೆಳ್ಳಿಗಳ ವಿಸ್ತಾರವಾದ ಸಂಗ್ರಹವನ್ನು ಒಳಗೊಂಡಂತೆ ಸಂಪೂರ್ಣ ಶ್ರೆ ಣಿಯ ಆಭರಣ ವಿನ್ಯಾಸಗಳನ್ನು ಸಾದರಪಡಿಸುತ್ತಿದೆ. ನಗರದ ಪ್ರಮುಖ ಸ್ಥಳದಲ್ಲಿರುವ ಮಳಿಗೆಯಾದ ನೂತನ ಕಳಶ ಸ್ಟೊರ‍್ಸ್, ನಿಜಕ್ಕೂ ವಿಲಾಸಿ ಸ್ವರ್ಗವಾಗಿದ್ದು, ಕಳಶ ಫೈನ್ ಜುವೆಲ್ಸ್ನ ಕೇವಲ ಅತ್ಯುತ್ತಮವಾದ ಆಭರಣಗಳನ್ನು ಸಾದರಪಡಿಸುತ್ತಿದೆ.
ನೂತನ ಕಾನ್‌ಸೆಪ್ಚುವಲೈಸ್ಡ್ ಜುವೆಲರಿ (ಪರಿಕಲ್ಪನಾತ್ಮಕ ಆಭರಣ)ಮಳಿಗೆ ಇಂದಿನ ಆಧುನಿಕ ಮಹಿಳೆಯನ್ನು ಬಿಂಬಿಸುವ ಚಿನ್ನ ಮತ್ತು ವಜ್ರಗಳ ಸೃಜನಾತ್ಮಕ ಶ್ರೆÃಣಿಯನ್ನು ಬೆಂಗಳೂರು ಗ್ರಾಹಕರಿಗೆ ಪರಿಚಯಿಸುತ್ತಿದೆ. ಈ ಶ್ರೆÃಣಿಯಲ್ಲಿ ದೇವಾಲಯ ಆಭರಣ, ಸೊಗಸಾದ ದೈನಂದಿನ ಆಭರಣ, ಮತ್ತು ಹಬ್ಬದ ಆಭರಣಗಳನ್ನು ಸಾದರಪಡಿಸುತ್ತಿದೆ. ಪ್ರಸ್ತುತ ಅಂತಾರಾಷ್ಟಿçÃಯ ಒಲವುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸೃಷ್ಟಿಸಲಾದ ಈ ಸಂಗ್ರಹ ೨೧ನೇ ಶತಮಾನದ ಮಹಿಳೆಯ ಆಕರ್ಷಣೆ ಮತ್ತು ಮನೋವೃತ್ತಿಯನ್ನು ಬಿಂಬಿಸುತ್ತದೆ.
ಈ ಸಂದರ್ಭದಲ್ಲಿ ಕಳಶ ಫೈನ್ ಜುವೆಲರಿ ನಿರ್ದೇಶಕ ಅಭಿಷೇಕ್ ಚಂದಾ ಅವರು ಮಾತನಾಡಿ, “ಉನ್ನತ ಮಟ್ಟದ ಆಭರಣ, ಸೇವೆ ಮತ್ತು ಒಟ್ಟಾರೆ ಶಾಪಿಂಗ್ ವಾತಾವರಣಗಳೊಂದಿಗೆ ನಮ್ಮ ಮಳಿಗೆಗಳಲ್ಲಿ ಗ್ರಾಹಕಾನುಭವವನ್ನು ಹೆಚ್ಚಿಸುವುದು ನಮ್ಮ ಸತತ ಪರಿಶ್ರಮವಾಗಿದೆ. ಬೆಂಗಳೂರಿನಲ್ಲಿ ಕಳಶ ಮಳಿಗೆ ನಮಗೆ ಗಮನಾರ್ಹ ಸಾಧನೆಯಾಗಿದೆ ಅಲ್ಲದೇ ಕರ್ನಾಟಕದಲ್ಲಿ ನಮ್ಮ ಮೊದಲ ಮಳಿಗೆಯಾಗುವುದರೊಂದಿಗೆ ಈ ನಗರ ಕಳಶ ಸಂಸ್ಥೆ ಎಷ್ಟು ಮುಖ್ಯ ಎಂಬುದನ್ನು ಎತ್ತಿ ತೋರುತ್ತದೆ” ಎಂದರು.

ಸೊಗಸಾದ ಒಳಾಂಗಣ, ಸಾಕಷ್ಟು ಪಾರ್ಕಿಂಗ್ ಸ್ಥಳಾವಕಾಶ, ಉತ್ತಮ ಸೇವೆ ನೀಡುವ ಸಿಬ್ಬಂದಿಯೊಂದಿಗೆ ಪ್ರತಿ ಕಳಶ ಮಳಿಗೆ ಹಣಕ್ಕೆ ತಕ್ಕ ಮೌಲ್ಯದೊಂದಿಗೆ ಅತ್ಯುತ್ತಮ ಆಭರಣಗಳ ಸಂಗ್ರಹವನ್ನು ಸಾದರಪಡಿಸುತ್ತದೆ ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos