ವಿದೇಶಿ ಟಿ20 ಲೀಗ್ ನಲ್ಲಿ ‘ಯುವಿ’ ಸಜ್ಜು

ವಿದೇಶಿ ಟಿ20  ಲೀಗ್  ನಲ್ಲಿ  ‘ಯುವಿ’ ಸಜ್ಜು

ನವದೆಹಲಿ, ಜೂ. 19: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೆಲದಿನಗಳ ಹಿಂದಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ವಿದೇಶಿ ಕ್ರಿಕೆಟ್ ಲೀಗ್ ಆಡಲು ಬಿಸಿಸಿಐ ಮನವಿ ಕೇಳಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್‌ನಿಂದ ನಿವೃತ್ತಿ ಪಡೆದಿದ್ದ ಭಾರತ ಕ್ರಿಕೆಟ್ ತಂಡದ ಆಟಗಾರ ಯುವರಾಜ್ ಸಿಂಗ್, ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಅನುಮತಿ ನೀಡುವಂತೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಗೆ ಅಧಿಕೃತವಾಗಿಪತ್ರ ಬರೆದಿದ್ದಾರೆ.   ‘ಯುವಿ ಕ್ರಿಕೆಟ್ ಆನಂದಿಸುವ ಸಲುವಾಗಿ ವಿದೇಶಿ ಲೀಗ್ ಗಳಲ್ಲಿ ಆಡಲು ಅನುಮತಿ ಕೋರಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಎನಿಸುತ್ತದೆ. ಅವರೀಗ ನಿವೃತ್ತಿ ಪಡೆದಿರುವ ಕಾರಣ, ಅನುಮತಿ ಸಿಗಲಿದೆ’ ಎಂದು ಬಿಸಿಸಿಐನ ಹೆಸರು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ವೀರೇಂದ್ರ ಸೆಹ್ವಾಗ್ ಹಾಗೂ ವೇಗದ ಬೌಲರ್ ಜಹೀರ್ ಖಾನ್, ಯುಎಇನಲ್ಲಿ ನಡೆದ ಟಿ10 ಲೀಗ್‌ನಲ್ಲಿ ಆಡಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos