ಉಪನೊಂದಣಾಧಿಕಾರಿಗಳ ರಾತ್ರಿ ನೊಂದಣಿ ಬಯಲು

ಉಪನೊಂದಣಾಧಿಕಾರಿಗಳ ರಾತ್ರಿ ನೊಂದಣಿ ಬಯಲು

ಬೆಂಗಳೂರು, ನ. 6: ರಿಯಲ್ ಎಸ್ಟೇಟ್ ಮಾಫಿಯಾಗಳ ಜತೆ ಕೈ ಜೋಡಿಸಿ ಉಪನೊಂದಣಾಧಿಕಾರಿಗಳು ರಾತ್ರಿ ವೇಳೆ ರೆವಿನ್ಯೂ ನಿವೇಶನಗಳನ್ನು ಅಕ್ರಮವಾಗಿ ಕರಾರು ಪತ್ರ ಮಾಡಿರುವ ರೋಚಕ ಸತ್ಯ  ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಜಾಲಹಳ್ಳಿ, ಲಗ್ಗೆರೆ, ಕೆಂಗೇರಿ, ಪೀಣ್ಯ, ಲಗ್ಗೆರೆ, ದಾಸನಪುರ, ಮಾದನಾಯಕನಹಳ್ಳಿ, ಆನೇಕಲ್, ಹೊಸಕೋಟೆ ಮತ್ತು ಬಿಡಿಎ ಉಪನೊಂದಣಾಧಿಕಾರಿಗಳ ಕಚೇರಿಗಳಲ್ಲಿ ಕಾವೇರಿ ವೆಬ್‌ಸೈಟ್ ತಿರುಚಿ ಅಕ್ರಮ ಎಸಗಿರುವ ಸಂಬಂಧ ಸಾಕ್ಷ ಲಭಿಸಿದೆ. ಕೆಲ ಅಧಿಕಾರಿ ಮತ್ತು ಸಿಬ್ಬಂದಿ ಕೆಲಸದ ಅವಧಿ ಮುಗಿದ ಮೇಲೆ ತಮ್ಮ ಕೈ ಚಳಕ ತೋರಿಸಿ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಬೆಂಗಳೂರು ನಗರ ಮತ್ತು ಬೆಂ. ಗ್ರಾಮಾಂತರ ಭಾಗದ ೧೦ಕ್ಕೂ ಅಧಿಕ ಉಪನೊಂದಣಾಧಿಕಾರಿಗಳ ಕಚೇರಿಗಳಲ್ಲಿ ಕೆಲಸದ ಅವಧಿ ಮುಗಿದ ನಂತರದಲ್ಲೂ ರಾತ್ರಿ 7 ರಿಂದ 1೦ ಗಂಟೆವರೆಗೆ ಕಾರ್ಯ ನಿರ್ವಹಿಸಿದ್ದಾರೆ. ಈ ವೇಳೆ ಕಾನೂನುಬಾಹಿರವಾಗಿ 4೦೦ಕ್ಕೂ ರೆವಿನ್ಯೂ ನಿವೇಶನಗಳ ಸೇಲ್ ಅಗ್ರಿಮೆಂಟ್‌ಗಳನ್ನು ಖರೀದಿದಾರರಿಗೆ  ನೊಂದಣಿ ಮಾಡಿಕೊಟ್ಟಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ತಂದೆ-ಮಗನ ಕೈಚಳಕ

ಮಾದನಾಯಕನಹಳ್ಳಿಯಲ್ಲಿ ಭೂಮಿ ಖರೀದಿಸಿದ್ದ ತಂದೆ, ಮಗ ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾವೇರಿ ವೆಬ್ ಸೈಟ್‌ನಲ್ಲಿ ಮಾಹಿತಿ ತಿರುಚಿ ೪೦ ಸೈಟ್ಗಳ ಸೇಲ್ ಅಗ್ರಿಮೆಂಟ್ ಮಾಡಿಸಿದ್ದಾರೆ. ಇದೀಗ ತಂದೆ-ಮಗ ತಲೆಮರೆಸಿಕೊಂಡಿದ್ದು, ಅಧಿಕಾರಿಗಳು ಸಹಕಾರ ನೀಡಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹಣದ ಅವ್ಯವ್ಯವಹಾರ

ಇಲಿ ಬಹುತೇಕ ಹಣದ ಅವ್ಯವರ ನಡೆಸುವ ಉದ್ದೇಶದಿಂದಲೇ ರಾತ್ರಿ 7ರಿಂದ 1೦ ಗಂಟೆಯವರೆಗೆ ಆಸ್ತಿ ನೊಂದಣಿ ವಹಿವಾಟು ನಡೆಸಿದ್ದಾರೆ. ನಡೆದಿದೆ. ಪ್ರಾಥಮಿಕ ತನಿಖೆ ವೇಳೆ ಉಪನೊಂದಣಾಧಿಕಾರಿಗಳ  ಕಚೇರಿಗಳ ೩೦ಕ್ಕೂ ಅಧಿಕ ಕಂಪ್ಯೂಟರ್ ಆಪರೇಟರ್‌ಗಳನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ.

ರಾಜ್ಯ ನೊಂದಣಿ ಮತ್ತು ಮುಂದ್ರಾಕ ಇಲಾಖೆ ಕಾವೇರಿ ವೆಬ್‌ಸೈಟ್‌ಲ್ಲಿ ನಿವೇಶನಗಳ ಮಾಹಿತಿ ಆಪ್ ಲೋಡ್ ಮಾಡುವ ಸಲುವಾಗಿ ಉಪನೊಂದಣಾಧಿಕಾರಿಗಳಿಗೆ ಇಲಾಖೆ ಪ್ರತ್ಯೇಕ ಲಾಗಿನ್ ಮತ್ತು ಪಾಸ್‌ವರ್ಡ್ ನೀಡಿದೆ. ಪಾಸವರ್ಡ್ ದುರುಪಯೋಗ ಮಾಡಿಕೊಂಡ ಕೆಲ ಕೆಲ ಉಪನೊಂಣಾಧಿಕಾರಿಗಳು ಕಂದಾಯ ನಿವೇಶನಗಳ ಮಾಹಿತಿಯನ್ನು ಕದ್ದು ಖರೀದಿದಾರರಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

ಎಲ್ಲಿಂದ ಎಲ್ಲಿಗೆ ಸಂಬಂಧ: ದಾಸನಪುರದ ರೆವಿನ್ಯೂ ನಿವೇಶನಗಳನ್ನು ಬಿಡಿಎ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಣಿ ಮಾಡಿಲಾಗಿದೆ. ದಾಸನಪುರದ ಉಪನೊಂದಣಾಧಿಕಾರಿ ಕಚೇರಿ ಮಾಹಿತಿಯನ್ನು ಬಿಡಿಎನಲ್ಲಿ ಕದ್ದು ಸೇಲ್ ಅಗ್ರಿಮೆಂಟ್ ಮಾಡಲಾಗಿದೆ. ಪ್ರತಿಯೊಂದು ಮಾರಾಟ ಕರಾರಿನಲ್ಲಿ ಹತ್ತಾರು ನಿವೇಶನಗಳ ಪರಭಾರೆಯಾಗಿವೆ.

23 ಮಂದಿಗೆ ನಿರೀಕ್ಷಣಾ ಜಾಮಿನು

ಕಾವೇರಿ ವೆಬ್‌ಸೈಟ್ ತಿರುಚಿ ಅಕ್ರಮ ಎಸಗಿದ ಪ್ರಕರಣದ ಸಂಬಧ 18 ಉಪನೊಂದಣಾಧಿಕಾರಿಗಳು ಸೇರಿ 23 ಮಂದಿಗೆ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮಿನು ನೀಡಿದೆ. ಶಾಂತಿನಗರ, ಕೆಂಗೇರಿ, ಲಗ್ಗೆರೆ, ಪೀಣ್ಯ ಸೇರಿ 18 ಉಪನೊಂದಣಾಧಿಕಾರಿಗಳು ಹಾಗೂ ನೌಕರರು ನಿರೀಕ್ಷಣಾ ಜಾಮಿನು ಕೋರಿ ಅರ್ಜಿ ಸಲ್ಲಿಸಿದ್ದರು.

ಮಾಹಿತಿ ನೀಡಲು ಹೈಕೋರ್ಟ್ ಸೂಚನೆ

ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ಅನುಷ್ಠಾನ ಮಾಡಿರುವ ಕಾವೇರಿ ಹಾಗೂ ಭೂಮಿ ತಂತ್ರಾಂಶ ಕುರಿತು ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಕೆ.ಆರ್. ಪುರದ ಕೆ. ಸುಸೈರಾಜ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ಎ.ಎಸ್.ಓಕಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos