ಡಿಪೋ ಮ್ಯಾನೇಜರ್ ಸೇರಿ ಇಬ್ಬರ ಅಮಾನತು

ಡಿಪೋ ಮ್ಯಾನೇಜರ್ ಸೇರಿ ಇಬ್ಬರ ಅಮಾನತು

ಬೆಂಗಳೂರು, ಜ. 7 : ಬಿಎಂಟಿಸಿ ಬಸ್ ಸರಣಿ ಅಪಘಾತ ಪ್ರಕರಣ ಸಂಬಂಧ ಸೀಗೇಹಳ್ಳಿ ಘಟಕ ವ್ಯವಸ್ಥಾಪಕ ಶಿವಲಿಂಗಯ್ಯ ಹಾಗೂ ಸಹಾಯಕ ತಾಂತ್ರಿಕ ಅಧೀಕ್ಷಕ ಮಧುಸೂದನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಆದೇಶಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ ಇಬ್ಬರ ಅಂತ್ಯ ಸಂಸ್ಕಾರಕ್ಕೆ ಅವರ ಕುಟುಂಬಕ್ಕೆ ತಲಾ ರೂ.25 ಸಾವಿರ ನೀಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ನಿಗಮದಿಂದಲೇ ಭರಿಸಲಾಗುವುದು. ತನಿಖೆಗೆ ಸೂಚನೆ ನೀಡಲಾಗಿದೆ, ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಶಿಖಾ ತಿಳಿಸಿದರು.
ಸರಣಿ ಅಪಘಾತಕ್ಕೆ ಬಿಎಂಟಿಸಿ ಬಸ್ ಬ್ರೇಕ್ ವೈಫಲ್ಯ ಕಾರಣ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಚಾಲಕ ವೆಂಕಟೇಶ್ ವಾರದಿಂದ ಬಸ್ ಬ್ರೇಕ್ ಸಮಸ್ಯೆ ಬಗ್ಗೆ ಡಿಪೋನ ಮ್ಯಾನೇಜರ್ ಶಿವಲಿಂಗಯ್ಯ ಅವರ ಗಮನಕ್ಕೆ ತಂದಿದ್ದೆ. ಆದರೆ, ಅದಕ್ಕೆ ಅವರು ಸ್ಪಂದಿಸಿರಲಿಲ್ಲ. ಬೇರೆ ವಾಹನ ಕೇಳಿದ್ದಕ್ಕೆ ಅಧಿಕಾರಿಗಳು ನನ್ನ ಮನವಿಗೆ ಸ್ಪಂದಿಸಲಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos