ದೆಹಲಿಯಲ್ಲಿಂದು ದಟ್ಟ ಮಂಜು

ದೆಹಲಿಯಲ್ಲಿಂದು ದಟ್ಟ ಮಂಜು

ನವದೆಹಲಿ, ಡಿ. 21 : ರಾಜಧಾನಿಯಲ್ಲಿ ದಟ್ಟ ಮಂಜಿನಿಂದಾಗಿ ರೈಲು ಮತ್ತು ವಿಮಾನಗಳ ಸಂಚಾರಕ್ಕೆ ಅಡ್ಡಿಯಾಯಿತು. ನಿನ್ನೆಯೂ ಕೂಡ ಇದೇ ಪರಿಸ್ಥಿತಿಯಿಂದ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ದೆಹಲಿಯಾದ್ಯಂತ ಮಂಜಿನ ತೆರೆ ಆವರಿಸಿದ ಕಾರಣ ಇಂದು ಮುಂಜಾನೆಯಿಂದ ಬಿಸಿಲೇರುವ ತನಕ ಹಲವು ರೈಲುಗಳು ಮತ್ತು ವಿಮಾನಗಳ ಸಂಚಾರ ವಿಳಂಬವಾಯಿತು. ಮಬ್ಬು ವಾತಾವರಣದಿಂದ ವಾಹನ ಚಾಲಕರು ಬೆಳಗ್ಗೆ ಎಚ್ಚರಿಕೆಯಿಂದ ಚಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ರಾಜಧಾನಿಯಲ್ಲಿ ಇಂದು ಮುಂಜಾನೆ 6.4 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದ್ದು, ವಾತಾವರಣದ ಆದ್ರ್ರತೆ (ತೇವಾಂಶ) ಸರಾಸರಿ ಶೇಕಡ 100ರಷ್ಟಿತ್ತು. ಇದರಿಂದ ಗಾಳಿಯ ಗುಣಮಟ್ಟವು ತೀವ್ರ ಹದಗೆಟ್ಟ ವರ್ಗದಲ್ಲಿ ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ದತ್ತಾಂಶ ಮಾಹಿತಿ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos