ನೆಲಸಮವಾದ ಕೋಳಿ ಸಾಕಣೆ ಕೇಂದ್ರ

ನೆಲಸಮವಾದ ಕೋಳಿ ಸಾಕಣೆ ಕೇಂದ್ರ

ಬಳ್ಳಾರಿ, ಡಿ. 31: 2014 ಮತ್ತು 2015ರ ಸಾಲಿನಲ್ಲಿ ನಿರ್ಮಾಣಗೊಂಡಿದ್ದ ತಾಯಿ ಕೋಳಿ ಸಾಕಾಣಿಕ ಕೇಂದ್ರದ ಕಟ್ಟಡ ಇದೀಗ ಜೆಸಿಬಿ ನಿಂದ ನೆಲಸಮ ಮಾಡಲ್ಪಟ್ಟಿದ್ದು, ಅಧಿಕಾರಿಗಳ ಬೇಜಾವಾಬ್ದಾರಿಯ ಕಾರಣ ಉದ್ಘಾಟನೆಗೆ ಮುನ್ನವೇ ಕೋಳಿ ಸಾಕಣೆ ಕೇಂದ್ರವೊಂದು ನೆಲಸಮವಾಗಿ ಸರ್ಕಾರದ ಬೊಕ್ಕೆಸಕ್ಕೆ ಲಕ್ಷ ಲಕ್ಷ ರು. ನಷ್ಟವಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ನಡೆದಿದೆ.

ಅಧಿಕಾರಿಗಳ ಅವೈಜ್ಞಾನಿಕ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಗಟ್ಟಲೆ ಹಣ ನಷ್ಟವಾಗಿದ್ದು ಉದ್ದೇಶಿತ ಕಟ್ಟಡದಲ್ಲಿ ಒಂದು ಕೋಳಿಯೂ ಸಾಕಾಣಿಕೆಮಾಡದೆ ಕಟ್ಟಡ ನೆಲಸಮ ಮಾಡಲಾಗಿದೆ.ಐದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕುರಿ ಉಣ್ಣೆ ಸಂಸ್ಕರಣ ಘಟಕ ಸ್ಥಾಪನೆಗೆ ಸ್ಥಳಾವಕಾಶ ಕೊರತೆ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನೆಲಸಮಗೊಳಿಸಲಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos