ವಿದ್ಯುತ್ ಗೆ ಡಿಮಾಂಡ್

ವಿದ್ಯುತ್ ಗೆ ಡಿಮಾಂಡ್

ಬೆಂಗಳೂರು, ಜ. 13 : ರಾಜ್ಯದಲ್ಲೀಗ ಬೇಸಿಗೆ ಆರಂಭಕ್ಕೂ ಮುನ್ನ ಚಳಿಗಾಲದಲ್ಲೇ ವಿದ್ಯುತ್ ಬೇಡಿಕೆ 12 ಸಾವಿರ ಮೆಗಾವಾಟ್ ಗಡಿದಾಟಿದೆ. ಈ ಪ್ರಮಾಣ ಬೇಸಿಗೆಯಲ್ಲಿ ಮತ್ತಷ್ಟು ಅಧಿಕವಾಗಲಿದೆಯಾದರೂ ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಏರಿಕೆಯಾಗಿದ್ದು, ಈ ಬಾರಿ ಲೋಡ್ಶೆಡ್ಡಿಂಗ್ ಮಾಡದಿರಲು ಕೆಪಿಟಿಸಿಎಲ್ ನಿರ್ಧರಿಸಿದೆ.
ರಾಜ್ಯದಲ್ಲಿ ಕಳೆದ ವರ್ಷ ಸುರಿದ ಉತ್ತಮ ಮಳೆಯಿಂದಾಗಿ ಆಗಸ್ಟ್, ಸೆಪ್ಟೆಂಬರ್ನಲ್ಲಿ 6,000 ಮೆ.ವಾ.ಗೆ ವಿದ್ಯುತ್ ಬೇಡಿಕೆ ಇಳಿಕೆ ಕಂಡಿತ್ತು. ಆಗ ಆರ್ಟಿಪಿಎಸ್ ಮತ್ತು ಬಿಟಿಪಿಎಸ್ ಘಟಕಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಡಿಸೆಂಬರ್ನಿಂದ ಪುನಃ ಬೇಡಿಕೆ ಏರುಮುಖವಾಗುತ್ತ ಬಂದಿದೆ. ಈಗ ಚಳಿಗಾಲವಿದ್ದರೂ ಜನವರಿಯಲ್ಲೇ ಬೇಡಿಕೆ ಪ್ರಮಾಣ 12,305 ಮೆ.ವಾ.ಗೆ ತಲುಪಿದೆ. ಬೇಸಿಗೆಯಲ್ಲಿ 12,500ರ ಗಡಿದಾಟಲಿದೆ ಎಂದು ಅಂದಾಜಿಸಲಾಗಿದೆ. 2019ರ ಮಾ.1ರಂದು 12,476 ಮೆ.ವಾ. ವಿದ್ಯುತ್ ಬೇಡಿಕೆ ಕಂಡು ಬಂದಿದ್ದು ಇದುವರೆಗಿನ ದಾಖಲೆ.

ಫ್ರೆಶ್ ನ್ಯೂಸ್

Latest Posts

Featured Videos