ಸಹಕಾರಿ ಸೌಲಭ್ಯ ಮನೆ ಬಾಗಿಲಿಗೆ ತಲುಪಿಸಿ

ಸಹಕಾರಿ ಸೌಲಭ್ಯ ಮನೆ ಬಾಗಿಲಿಗೆ ತಲುಪಿಸಿ

ಗೌರಿಬಿದನೂರು: ಕೋವಿಡ್ ಕೊರೋನಾ ಹರಡಿರುವ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳು ಜನರಿಗೆ ತಲುಪುದು ಕಷ್ಟಕರವಾಗುತ್ತಿದ್ದು ಇಂತಹ ಸಂದರ್ಭದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಬಡರೈತರ ಹಾಗೂ ಸ್ತ್ರೀಶಕ್ತಿಸಂಘಗಳ ಸದಸ್ಯರಿಗೆ ಸಾಲಸೌಲಭ್ಯಗಳನ್ನು ತಲುಪಿಸುವ ಮೂಲಕ ಬಡವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.

ಗೌರಿಬಿದನೂರು ನಗರದ ಸ್ಟೆಲ್ಲಾ ಕಾನ್ವೆಂಟ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಹಾಗೂ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ವತಿಯಿಂದ ೩೫ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ಕಂಪ್ಯೂಟರ್ ವಿತರಣೆ ಹಾಗೂ ಆನ್‌ಲೈನ್ ಸಂಪರ್ಕ ಚಾಲನಾ ಕಾರ್ಯಕ್ರಮದ ಸಭೆಯನ್ನುದ್ದೇಶಿಸಿ ಮಾತನಾಡಿದರು.

ನಾವು ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಯೋಗ್ಯತೆ ಇದ್ದವರು ಸಮರ್ಥವಾಗಿ ಕಾರ್ಯಭಾರ ನಡೆಸಿ ಯಶಸ್ವಿಯಾಗುತ್ತಾರೆ ಆ ದೃಷ್ಠಿಯಲ್ಲಿ ಚಿಂತನೆ ನಡೆಸುವವನು ನಾನು ೨೦೧೪ರಲ್ಲಿ ೮ವರ್ಷಗಳ ಹಿಂದೆ ಬ್ಯಾಂಕ್ ಸಂಕಷ್ಟದ ಪರಿಸ್ಥಿತಿಯಲ್ಲಿತ್ತು ಅದನ್ನು ಉತ್ತಮ ಸ್ಥಿತಿಗೆ ತರುವಲ್ಲಿ ನಮ್ಮೆಲ್ಲರ ಶ್ರಮ ಇದೆ, ಈಗ ಉತ್ತಮ ಸ್ಥಿತಿಯಲ್ಲಿದ್ದು ಬಡ ರೈತರಿಗೆ ಹಾಗೂ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಕಡಿಮೆ ಬಡ್ಡಿಯಲ್ಲಿ ಹಾಗೂ ಬಡ್ಡಿರಹಿತ ಸಾಲ ನೀಡುತ್ತಿದ್ದು ಅದೇ ರೀತಿಯಲ್ಲಿ ಮರು ಪಾವತಿಯನ್ನೂ ಪಡೆಯುತ್ತಿದೆ ಮಹಿಳೆಯರೇ ಹೆಚ್ಚು ಸಾಲ ಪಡೆಯುತ್ತಿರುವುದರಿಂದ ಮರುಪಾವತಿ ಹೆಚ್ಚಾಗಿ ಆಗುತ್ತಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos