ಡೆಲ್ಲಿ ಕ್ಯಾಪಿಟಲ್ಸ್ ಗೆ ಸಿಎಸ್ ಕೆ ಶಾಕ್ !

ಡೆಲ್ಲಿ ಕ್ಯಾಪಿಟಲ್ಸ್ ಗೆ ಸಿಎಸ್ ಕೆ ಶಾಕ್ !

ವಿಶಾಖಪಟ್ಟಣಂ, ಮೇ. 11, ನ್ಯೂಸ್ ಎಕ್ಸ್ ಪ್ರೆಸ್: ಐಪಿಎಲ್ ಟೂರ್ನಿಯಲ್ಲಿ ಫೈನಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್  ಕನಸು ಭಗ್ನಗೊಂಡಿದೆ. 12ನೇ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ  ಪ್ಲೇ ಆಫ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್, ಟೂರ್ನಿಯಿಂದ ಹೊರಬಿದ್ದಿದೆ.    ಪೃಥ್ವಿ ಶಾ  (5 ), ಶಿಖರ್ ಧವನ್ (18), ಕಾಲಿನ್ ಮುನ್ರೋ (27) ಕ್ಯಾಪ್ಟನ್ ಶ್ರೇಯಸ್ ಅಯ್ಯರ್ (13)  ತಂಡಕ್ಕೆ ಆಸರೆಯಾದ ರಿಷಭ್ ಪಂತ್ 25 ಎಸೆತ 2 ಬೌಂಡರಿ ,1 ಸಿಕ್ಸರ್ ( 38) ಡೆಲ್ಲಿ 9 ವಿಕೆಟ್ ನಷ್ಟಕ್ಕೆ  ಚನ್ನೈ ಸೂಪರ್ ಕಿಂಗ್ ಗೆ 148 ರನ್ ಟಾರ್ಗೆಟ್ ನೀಡಿತ್ತು.  ಫಾಫ್ ಡುಪ್ಲೆಸಿಸ್, ಶೇನ್ ವಾಟ್ಸನ್ ಪವರ್ ಪ್ಲೇನಲ್ಲಿ  ಆಕ್ರಮಣಕಾರಿ  ಪ್ರದರ್ಶಿನದಿಂದ  42 ರನ್ನಗಳ  ಹೊಳೆ ಹರಿಸಿದ್ರು. ಫಾಫ್ ಡುಪ್ಲೆಸಿಸ್ 39 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ( 50) ವಾಟ್ಸನ್ ಅರ್ಧಶತಕ  ಬಾರಿಸಿ ಔಟ್ ಆದರು. ಸುರೇಶ್ ರೈನಾ  (11), ಎಂಎಸ್ ಧೋನಿ  ಜೊತೆಯಾಗಿ ಅಂಬಟಿ ರಾಯುಡು ತಂಡವನ್ನು ಗೆಲುವಿನ ದಡ ಸೇರಿಸ್ತಿದ್ದಾರೆ ಎನ್ನುವಾಗಲೇ ಧೋನಿ  ಔಟ್ ಆದರು. ಬಳಿಕ ಬ್ರಾವೋ ರಾಯುಡು ಸೇರಿ ತಂಡದ ಗೆಲುವನ್ನು ದಡ ಸೇರಿಸಿದರು.

ಒಟ್ಟಾರೆ 19 ಓವರ್ ಗಳಲ್ಲಿ  151 ರನ್ ಗಳಿಸಿದ ಚೆನ್ನೈ ಜಯ ಸಾಧಿಸಿದೆ. 8ನೇ ಬಾರಿಗೆ ಫೈನಲ್ ಪ್ರವೇಶಿಸಿತು. ಒಟ್ಟು 3 ಬಾರಿ ಕಪ್ ಗೆದ್ದಿರುವ ಸಿಎಸ್ ಕೆ ಈ ಬಾರಿ ಮುಂಬೈಯನ್ನು ಮಣಿಸುವುದೇ ಎನ್ನುವುದು ನಾಳೆ ಹೈದ್ರಾಬಾದ್ನಲ್ಲಿ ತಿಳಿಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos