ಬೆಂಗಳೂರಿಗೆ ದೆಹಲಿ ಮಾದರಿ: ಎಎಪಿ

ಬೆಂಗಳೂರಿಗೆ ದೆಹಲಿ ಮಾದರಿ: ಎಎಪಿ

ಬೆಂಗಳೂರು, ನ. 19: 2020ರ ಬಿಬಿಎಂಪಿ ಚುನಾವಣೆಗೆ ಆಮ್ ಆದ್ಮಿ ಪಕ್ಷವು ಸಜ್ಜುಗೊಳ್ಳುತ್ತಿರುವುರ ಬಗೆಗೆ ಚುನಾವಣಾ ತಯಾರಿ ಹಾಗೂ ಪಕ್ಷ ಸಂಘಟನಾತ್ಮಕ ಚಟುವಟಿಕೆಗಳ ಕುರಿತು ಪಕ್ಷದ ರಾಷ್ಟ್ರೀಯ ರಾಜಕೀಯ ವ್ಯವಹಾರ ಸಮಿತಿ(ಪಿಎಸಿ) ಸದಸ್ಯರಾದ ಅತಿಷಿಯವರು ಪಕ್ಷದ ರಾಜ್ಯ ನಾಯಕರೊಂದಿಗೆ ಚರ್ಚಿಸಿದರು.

ಬೆಂಗಳೂರಿನ ಅಭಿವೃದ್ಧಿಗೆ ಸಮಗ್ರ ಮುನ್ನೋಟ ಮತ್ತು ನವೀನ ಯೋಜನೆಗಳನ್ನು ದೆಹಲಿ ಮಾದರಿಯಲ್ಲಿ ರೂಪಿಸಲಾಗುತ್ತಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವು ಶಿಕ್ಷಣ, ಆರೋಗ್ಯ, ನೀರಿನ ಸಮಸ್ಯೆ, ಮಹಿಳೆ ಮತ್ತು ಮಕ್ಕಳ ಸಬಲೀಕರಣಕ್ಕೆ ಒತ್ತು ನೀಡಿ ಕೆಲಸ ಮಾಡುವ ಮೂಲಕ ಸಮಗ್ರ ಕ್ಷೇತ್ರದಲ್ಲಿಯೂ ಅದ್ಭುತ ರೀತಿಯಲ್ಲಿ ಅಭಿವೃದ್ಧಿ ಸಾಧಿಸಿದೆ. ಅದೇ ಮಾದರಿಯಲ್ಲಿ ಬೆಂಗಳೂರನ್ನು ವಿಶ್ವದರ್ಜೆಯ ನಗರವನ್ನಾಗಿ ಕಟ್ಟಲು ಪಕ್ಷವು ಪಣತೊಟ್ಟಿದೆ. ಬೆಂಗಳೂರಿನಲ್ಲಿ ತಾಂಡವವಾಡುತ್ತಿರುವ ಘನತ್ಯಾಜ್ಯ, ಟ್ರಾಫಿಕ್, ನೀರಿನ ಸಮಸ್ಯೆಗಳನ್ನು ಪರಿಶೀಲಿಸಿ ಯೋಜನೆಗಳನ್ನು ರೂಪಿಸುವ ಮೂಲಕ ಆಮ್ ಆದ್ಮಿ ಪಕ್ಷವು ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಧಿಕಾರ ರಚಿಸಲಿದೆ ಎಂದು ಅತಿಷಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos