ಫೈನಲ್ ಗೆ ಲಗ್ಗೆ ಇಟ್ಟ ಡೆಲ್ಲಿ ಕ್ಯಾಪಿಟಲ್ಸ್

ಫೈನಲ್ ಗೆ ಲಗ್ಗೆ ಇಟ್ಟ ಡೆಲ್ಲಿ ಕ್ಯಾಪಿಟಲ್ಸ್

ಬೆಂಗಳೂರು: ಮಹಿಳಾ ಪ್ರೀಮಿಯಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್ ಗೆ ಲಗ್ಗೆ ಹಾಕಿದೆ ನೆನ್ನೆ ನಡೆದ ಕೊನೆಯ ಪಂದ್ಯದಲ್ಲಿ ಡೆಲ್ಲಿ 7ವಿಕೆಟ್ ಅಂತರದಿಂದ ಗುಜರಾತ್ ಗೆ ಸೋಲುನಿಸಿ ತನ್ನ ಅಂಕವನ್ನು 12ಕ್ಕೆ ಏರಿಸಿಕೊಂಡಿದೆ.

ಶುಕ್ರವಾರದ ಎಲಿಮಿಟೆಡ್ ಪಂದ್ಯದಲ್ಲಿ ಮುಂಬೈ ಆರ್‌ಸಿಬಿ ಮುಖಾಮುಖಿ ಆಗಲಿದೆ ಇಲ್ಲಿ ಗೆದ್ದ ತಂಡ ಭಾನುವಾರ ಫೈನಲ್ ಅಲ್ಲಿ ಡೆಲ್ಲಿಯನ್ನು ಎದುರಿಸಲಿದೆ .

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024 ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಾವುದೇ ಅಡೆತಡೆಗಳಿಲ್ಲದೆ ಈ ಸೀಸನ್​ನ ಫೈನಲ್​ಗೇರಿದೆ. ಇತ್ತ ಲೀಗ್​ನ ಕೊನೆಯ ಪಂದ್ಯದಲ್ಲೂ ಸೋತ ಗುಜರಾತ್ ತಂಡ ಸತತ ಎರಡನೇ ಬಾರಿಗೆ ಪ್ಲೇ ಆಫ್​ಗೆ ಏರಲಾಗದೆ ಟೂರ್ನಿಯಿಂದ ಹೊರಬಿದ್ದಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡಕ್ಕೆ ಮತ್ತೆ ಅದೇ ಕಳಪೆ ಆರಂಭ ಸಿಕ್ಕಿತು. ನಾಯಕಿ ಬೆತ್ ಮೂನಿ ಈ ಬಾರಿ ಖಾತೆ ತೆರೆಯಲು ಸಾಧ್ಯವಾಗದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕೆಳಕ್ರಮಾಂಕದಲ್ಲಿ ಹೋರಾಟದ ಇನ್ನಿಂಗ್ಸ್ ಆಡಿದ ಭಾರತಿ ಫುಲ್ಮಾಲಿ 42 ರನ್​ಗಳ ಕಾಣಿಕೆ ನೀಡಿದರು. ಕ್ಯಾಥರಿನ್ ಎಮ್ಮಾ ಬ್ರೈಸ್ ಕೂಡ 28 ರನ್ ಹಾಗೂ ಫೋಬೆ ಲಿಚ್ಫೀಲ್ಡ್ 21 ರನ್​ಗಳ ಇನ್ನಿಂಗ್ಸ್ ಆಡಿದರು. ಇವರ ಆಟದಿಂದಾಗಿ ತಂಡ ಅಲ್ಪ ರನ್​ಗಳ ಟಾರ್ಗೆಟ್ ನೀಡಿತು.

ಗುಜರಾತ್ ನೀಡಿದ 129 ರನ್​ಗಳ ಅಲ್ಪಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಎಂದಿನಂತೆ ಅಬ್ಬರದ ಆರಂಭ ಪಡೆದುಕೊಂಡಿತು. ನಾಯಕಿ ಮೆಗ್​ ಲ್ಯಾನಿಂಗ್ 18 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಅದಾಗ್ಯೂ ಸ್ಫೋಟಕ ಓಪನರ್ ಶಫಾಲಿ ವರ್ಮಾ ಅರ್ಧಶತಕ ಸಿಡಿಸಿದಲ್ಲದೆ ತಂಡವನ್ನು ಸುಲಭವಾಗಿ ಗೆಲುವಿನ ಸನಿಹಕ್ಕೆ ತಂದರು. ಅಂತಿಮವಾಗಿ ಶಫಾಲಿ ಅವರ ಇನ್ನಿಂಗ್ಸ್ 71 ರನ್​ಗಳಿಗೆ ಕೊನೆಗೊಂಡಿತು. ಶಫಾಲಿಗೆ ಉತ್ತಮ ಸಾಥ್ ನೀಡಿದ ಜೆಮಿಮಾ ರಾಡ್ರಿಗಸ್ ಕೂಡ ಅಜೇಯ 38 ರನ್​ಗಳ ಇನ್ನಿಂಗ್ಸ್ ಆಡಿದರು.

ಫ್ರೆಶ್ ನ್ಯೂಸ್

Latest Posts

Featured Videos