ಹಣ ಹೆಕ್ಕಲು ಮೆಟ್ರೋ ಹಳಿಗೆ ಜಿಗಿದ ಮಹಿಳೆ

ಹಣ ಹೆಕ್ಕಲು ಮೆಟ್ರೋ ಹಳಿಗೆ ಜಿಗಿದ ಮಹಿಳೆ

ನವದೆಹಲಿ, ಮಾ.12, ನ್ಯೂಸ್ ಎಕ್ಸ್ ಪ್ರೆಸ್:  ಮೆಟ್ರೋ ಹಳಿಯ ಮೇಲೆ ಬಿದ್ದಿದ್ದ ತನ್ನ ಹಣವನ್ನು ಹೆಕ್ಕಲು ಹಳಿಗೆ ಜಿಗಿದ ಮಹಿಳೆ ಅದೃಷ್ಟವಶಾತ್‌ ಜೀವ ಸಹಿತ ಪಾರಾದ ಘಟನೆ ಇಂದು ಮಂಗಳವಾರ ದಿಲ್ಲಿಯ ದ್ವಾರಕ ಮೋರ್‌ ಸ್ಟೇಶನ್‌ ನಲ್ಲಿ ನಡೆದಿದೆ. ಈ ಘಟನೆಯಿಂದಾಗಿ ದಿಲ್ಲಿ ಮೆಟ್ರೋ ಬ್ಲೂ ಲೈನ್‌ ಸೇವೆಯು ಸ್ವಲ್ಪ ಕಾಲ ಬಾಧಿತವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಹಣ ಹೆಕ್ಕಲು ರೈಲು ಹಳಿಗೆ ಜಿಗಿದ ಮಹಿಳೆ, 24ರ ಹರೆಯದ, ನಗರದ ಜರೋಡಾ ಕಲಾನ್‌ ಪ್ರದೇಶದ ನಿವಾಸಿ ಎಂದು ಗೊತ್ತಾಗಿದೆ. ಅದೃಷ್ಟವಶಾತ್‌ ಜೀವ ಸಹಿತ ಪಾರಾದ ಈಕೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ಡಿಎಂಆರ್‌ಸಿ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos