ದೆಹಲಿಯಲ್ಲಿ ದಾಖಲೆಯ ತಾಪಮಾನ

ದೆಹಲಿಯಲ್ಲಿ ದಾಖಲೆಯ ತಾಪಮಾನ

ನವದೆಹಲಿ, ಜೂನ್. 11, ನ್ಯೂಸ್ ಎಕ್ಸ್ ಪ್ರೆಸ್: ರಾಷ್ಟ್ರ ರಾಜಧಾನಿಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು,  ಕೆಲವು ಭಾಗಗಳಲ್ಲಿ ದಾಖಲೆಯ 48 ಡಿಗ್ರಿ ಸೆಲಿಯಸ್‌ಗೆ ತಲುಪಿತ್ತು. 2014ರ ಜೂನ್‌ 9 ರಂದು 47.8 ಡಿಗ್ರಿ ತಾಪಮಾನವೇ ದಾಖಲೆ ಯಾಗಿತ್ತು. ಪಾಲಂನಲ್ಲಿ ಅತ್ಯಧಿಕ ತಾಪಮಾನ ಕಂಡುಬಂದಿದೆ. ಪಶ್ಚಿಮ ಭಾಗದಿಂದ ಒಣ ಗಾಳಿ ಬೀಸಿದ್ದೇ ತಾಪಮಾನ ಏರಿಕೆಗೆ ಕಾರಣ ಎಂದು ದಿಲ್ಲಿ ಹವಾಮಾನ ಇಲಾಖೆ ನಿರ್ದೇಶಕ ಕುಲದೀಪ್‌ ಶ್ರೀವಾಸ್ತವ ಹೇಳಿದ್ದಾರೆ.

ಮಾನ್ಸೂನ್‌ ಪರಿಣಾಮವಾಗಿ ಮಳೆಯಾಗಲು ಹಲವು ದಿನಗಳವರೆಗೆ ಕಾಯಬೇಕಾಗುತ್ತದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜೂನ್‌ ಮಾಸಾಂತ್ಯದಲ್ಲಿ ಮಾನ್ಸೂನ್‌ ಮಾರುತಗಳು ದಿಲ್ಲಿಗೆ ತಲುಪುವ ಸಾಧ್ಯತೆಯಿದೆ. ತಾಪಮಾನ ಸತತವಾಗಿ ಎರಡು ದಿನ ಗಳವರೆಗೆ 47 ಡಿಗ್ರಿ ಇದ್ದರೆ ಉಷ್ಣ ಹವೆ ಭಾರಿ ಪ್ರಮಾಣದಲ್ಲಿ ಬೀಸಲಿದೆ. ಕಳೆದ ಕೆಲವು ದಿನಗಳಿಂದ ತಾಪಮಾನ 45 ಡಿಗ್ರಿಗೆ ಇಳಿದಿದ್ದರಿಂದ ಉಷ್ಣ ಹವೆಯ ಪ್ರಭಾವ ಕಡಿಮೆಯಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos