ಕಂಪ್ಲಿಯಲ್ಲಿ ಮದುಮಗನಿಗೆ ಸೋಲು!

ಕಂಪ್ಲಿಯಲ್ಲಿ ಮದುಮಗನಿಗೆ ಸೋಲು!

ಕಂಪ್ಲಿ, ನ. 14: ಇಂದು ಕಂಪ್ಲಿ ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮದುವೆ ದಿನವೇ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡಿದ್ದಾರೆ. ಇಂದು ಕಂಪ್ಲಿ ನಗರದ ಕೆ.ಎಸ್. ಭವನದಲ್ಲಿ ರಾಜೇಶ್ ಅವರ ವಿವಾಹ ನಡೆಯಲಿದೆ.
ಹೌದು, ಕಂಪ್ಲಿ ಪುರಸಭೆಗೆ 8ನೇ ವಾರ್ಡ್ ನಿಂದ ಕಣಕ್ಕಿಳಿದ್ದ ಕಾಂಗ್ರೆಸ್ ಅಭ್ಯರ್ಥಿ ರಾಜೇಶ್ ಅವರು ಬಿಜೆಪಿ ಅಭ್ಯರ್ಥಿ ಟಿ.ವಿ. ಸುದರ್ಶನ್ ರೆಡ್ಡಿ ಅವರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮದುವೆಯ ದಿನವೇ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
ಚುನಾವಣೆಯಲ್ಲಿ ಮದುಮಗ ರಾಜೇಶ್ ಅವರಿಗೆ 11 ಮತಗಳಿಂದ ಸೋಲು ಅನುಭವಿಸಿದ್ದಾರೆ. ಮದುವೆಯ ದಿನ ಗೆಲುವಿನ ಉಡುಗೊರೆಯ ನಿರೀಕ್ಷೆಯಲ್ಲಿದ್ದ ರಾಜೇಶ್ ಅವರಿಗೆ ಮತದಾರ ಸೋಲಿನ ರುಚಿ ತೋರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos